ಹಂದಿ ಮರಿಯೊಂದಿಗೆ ಎಟಿಎಂ ಕ್ಯೂನಲ್ಲಿ ಪ್ರತ್ಯಕ್ಷನಾದ ಟಾಲಿವುಡ್ ನಟ

ಈ ಸುದ್ದಿಯನ್ನು ಶೇರ್ ಮಾಡಿ

tollywood

ಹೈದ್ರಾಬಾದ್,ನ.24- ಪ್ರಧಾನಿ ನರೇಂದ್ರ ಮೋದಿ 500, 1000 ರೂ. ಮುಖಬೆಲೆಯ ಹಳೆ ನೋಟುಗಳ ಮಾನ್ಯತೆಯನ್ನು ರದ್ದುಗೊಳಿಸಿರುವುದರಿಂದ ಪ್ರತಿದಿನ ದೇಶದೆಲ್ಲೆಡೆ ಎಟಿಎಂಗಳ ಮುಂದೆ ಜನಸಾಗರವೇ ನೆರೆದಿರುತ್ತದೆ. ಆದರೆ ಇಂದು ಹೈದ್ರಾಬಾದ್‍ನ ಎಟಿಎಂ ಕೇಂದ್ರ ಮುಂದೆ ಹಂದಿ ಮರಿಯೊಂದಿಗೆ ಟಾಲಿವುಡ್‍ನ ನಟ, ನಿರ್ದೇಶಕ ರವಿಬಾಬು ಹಂದಿ ಮರಿಯೊಂದಿಗೆ ಎಟಿಎಂ ಕ್ಯೂನ್‍ನಲ್ಲಿ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನ್ನ ಮುಂದಿನ ಚಿತ್ರದ ಕೆಲವು ದೃಶ್ಯಗಳಿಗಾಗಿ ನನ್ನ ಸ್ನೇಹಿತನ ಫಾರಂನಿಂದ ಕೆಲವು ಹಂದಿಮರಿಯನ್ನು ನನ್ನೊಂದಿಗೆ ತಂದು ಇಟ್ಟುಕೊಂಡಿದ್ದೇನೆ, ಅಲ್ಲದೆ ಇತ್ತೀಚೆಗೆ ನಾನು ಹೋಗುವ ಎಲ್ಲೆಡೆಗೂ ಈ ಹಂದಿ ಮರಿಯನ್ನು ಕೊಂಡೊಯ್ಯುತ್ತೇನೆ ಎಂದರು. ಹಾಗೆಯೇ ಇಂದು ಹಣದ ಅವಶ್ಯಕತೆಯಿಂದಿದ್ದರಿಂದ ಇಲ್ಲಿಗೂ ಹಂದಿಮರಿಯೊಂದಿಗೆ ಎಟಿಎಂ ಬಂದಿದ್ದೇನೆ ಎಂದು ರವಿಬಾಬು ಸ್ಪಷ್ಟಪಡಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin