ಹುಂಡಿಯಲ್ಲಿದ್ದ ನೋಟು ಬದಲಿಗೆ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

temple--money--box

ಚಿಕ್ಕನಾಯಕನಹಳ್ಳಿ, ನ.24- ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಹುಂಡಿಯ ಹಣದಲ್ಲಿದ್ದ ನೋಟುಗಳನ್ನು ಬದಲಾಯಿಸಿ ಬ್ಯಾಂಕಿಗೆ ಜಮಾ ಮಾಡಲು ಕಂದಾಯ ತನಿಖಾಧಿಕಾರಿಗಳ ತಂಡದೊಂದಿಗೆ ಮುಜರಾಯಿ ಅಧಿಕಾರಿಗಳು ಹಾಗೂ ದೇವಸ್ಥಾನದ ವಿಶ್ವಸ್ಥಮಂಡಳಿ ಕ್ರಮವಹಿಸಿದರು. ಕೇಂದ್ರ ಸರ್ಕಾರದ ಹಳೆ ನೋಟುಗಳಾದ 500 ಮತ್ತು 1000ರೂ ನೋಟುಗಳ ರದ್ದತಿ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ, ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಜಾತ್ರೆಯ ಸಮಯದಲ್ಲಿ ಹುಂಡಿಯ ಹಣವನ್ನು ಎಣಿಸಲಾಗಿತ್ತು ನೋಟುಗಳ ಬದಲಾವಣೆಯಿಂದ ಐದು ತಿಂಗಳ ನಂತರ ಪುನಃ ಹಣವನ್ನು ಎಣಿಸಲಾಗುತ್ತಿದೆ ಎಂದು ದೇವಾಲಯದ ಕನ್ವೀನಿಯರ್ ಚಂದ್ರಶೇಖರಶೆಟ್ಟರು ತಿಳಿಸಿದರು.

ಪ್ರಭಾರ ಕಂದಾಯ ತನಿಖಾಧಿಕಾರಿ ಕೃಷ್ಣಪ್ಪ ಮಾತನಾಡಿ, ಆಂಜನೇಯಸ್ವಾಮಿ ದೇವಾಲಯದಲ್ಲಿ 1ಲಕ್ಷದ 90ಸಾವಿರದ 466ರೂ ಹಣ ಸಂಗ್ರಹವಾಗಿದ್ದು, ಮೇಲಧಿಕಾರಿಗಳ ಶಿಪಾರಸ್ಸಿನಂತೆ ಈ ಹಣವನ್ನು ಬ್ಯಾಂಕಿಗೆ ಜಮಾ ಮಾಡಲಾಗುವುದು ಎಂದರು.ಕಂದಾಯಾಧಿಕಾರಿ ದೇವ್‍ಕುಮಾರ್, ಗ್ರಾಮಲೆಕ್ಕಿಗರಾದ ಕೌಸರ್‍ಬಾನು, ಚಂದ್ರಶೇಖರ್, ಧರ್ಮದರ್ಶಿಗಳಾದ ಲವಕುಮಾರ್, ಕುಮಾರಯ್ಯ, ಸಂಜೀವಯ್ಯ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

 

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin