ಚೀನಾದಲ್ಲಿ ನಿರ್ಮಾಣ ಹಂತದ ಸ್ಥಾವರ ಕುಸಿತ : ಮೃತರ ಸಂಖ್ಯೆ 74ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

China-011

ಬೀಜಿಂಗ್, ನ.25- ಪೂರ್ವ ಚೀನಾದ ಜಿಯಾಂಗ್‍ಕ್ಷಿ ಪ್ರಾಂತ್ಯದ ವಿದ್ಯುತ್ ಸ್ಥಾವರದಲ್ಲಿ ನಿನ್ನೆ ನಿರ್ಮಾಣ ಹಂತದಲ್ಲಿದ್ದ ಅಂಕಣವೊಂದು ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 74ಕ್ಕೇರಿದೆ.  ಕೂಲಿಂಗ್ ಟವರ್ ಪ್ಲಾಟ್‍ಫಾರಂ ನಿನ್ನೆ ಬೆಳಿಗ್ಗೆ 7ರ ಸುಮಾರಿನಲ್ಲಿ ಕುಸಿದುಬಿದ್ದು ಈ ದುರಂತ ಸಂಭವಿಸಿತ್ತು. ಭಗ್ನಾವಶೇಷಗಳ ಕಟ್ಟಡದ ಕೆಳಗೆ ಕಬ್ಬಿಣದ ತೊಲೆಗಳು, ಉಕ್ಕಿನ ಪೈಪುಗಳ ಅಡಿ ಸಿಲುಕಿ ಈವರೆಗೆ 74 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರಿ ಒಡೆತನದ ಕ್ಸಿನ್‍ಹುವಾ ವಾರ್ತಾ ಸಂಸ್ಥೆ ಹೇಳಿದೆ.  ಫೆಂಗ್‍ಚೆಂಗ್ ವಿದ್ಯುತ್ ಘಟಕದ ಶೈತ್ಯ ಗೋಪುರದ ವೇದಿಕೆ ಕುಸಿದ ಸಂದರ್ಭದಲ್ಲಿ 80 ಮಂದಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ 200ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಶ್ವಾನಗಳನ್ನು ಬಳಸಲಾಗಿತ್ತು.

ಇದು ಈ ವರ್ಷದ ಅತ್ಯಂತ ದೊಡ್ಡ ಕೈಗಾರಿಕಾ ದುರಂತದಲ್ಲಿ ಒಂದು ಎಂದು ಬಣ್ಣಿಸಲಾಗಿದೆ. ಕಳೆದ ವರ್ಷ ಚೀನಾದ ಬಂದರು ನಗರಿ ಟಿಯಾನ್‍ಜಿನ್‍ನಲ್ಲಿ ಅವಳಿ ಸ್ಫೋಟ ಸಂಭವಿಸಿ ಕನಿಷ್ಠ 173 ಮಂದಿ ಸಾವಿಗೀಡಾಗಿದ್ದರು. 2014ರ ಅಗಸ್ಟ್‍ನಲ್ಲಿ ಚೀನಾದ ಪೂರ್ವ ಭಾಗದ ಕಾರು ಬಿಡಿಭಾಗ ತಯಾರಿಕಾ ಘಟಕದಲ್ಲಿ ಲೋಹ ಧೂಳು ಸ್ಫೋಟದಿಂದ ಕನಿಷ್ಠ 75 ಮಂದಿ ಮೃತಪಟ್ಟಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin