ಪೆಸಿಫಿಕ್ ಮಹಾಸಾಗರದಲ್ಲಿ ಭಾರೀ ಭೂಕಂಪ, ಚಂಡಮಾರುತಕ್ಕೆ ಹಲವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Tsunami

ಸ್ಯಾನ್ ಸಾಲ್ವಡೋರ್, ನ.25- ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸಿದ ಭಾರೀ ಭೂಕಂಪದಿಂದ ಎಲ್ ಸಾಲ್ವಡಾರ್, ನಿಕರಾಗುವಾ ಮತ್ತು ಕೋಸ್ಟಾರಿಕಾ ಕರಾವಳಿ ಪ್ರದೇಶಗಳಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದ್ದು, ಹಲವರು ಸಾವಿಗೀಡಾಗಿದ್ದಾರೆ. ಸಾಗರದಲ್ಲಿ ಅಲ್ಲೋಲ-ಕಲ್ಲೋಲದೊಂದಿಗೆ ಸುನಾಮಿ ಆತಂಕವೂ ಎದುರಾಗಿರುವುದರಿಂದ ಜನರು ಭಯಭೀತರಾಗಿ ಸುರಕ್ಷಿತ ಪ್ರದೇಶಗಳತ್ತ ಪಲಾಯನ ಮಾಡಿದ್ದಾರೆ.  ಮಧ್ಯ ಅಮೆರಿಕದ ಪೆಸಿಫಿಕ್ ಮಹಾಸಾಗರದಲ್ಲಿ 7.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಕೆಲವು ನಿಮಿಷಗಳ ನಂತರ ಕೆರೆಬಿಯನ್ ಕರಾವಳಿಯ ಈ ಮೂರು ದೇಶಗಳ ಮೇಲೆ ಭೀಕರ ಚಂಡಮಾರುತ ಅಪ್ಪಳಿಸಿತು. ನಿಕರಾಗುವಾ ತೀವ್ರ ವಿಕೋಪಕ್ಕೆ ತುತ್ತಾಗಿದ್ದು, ಹೆಚ್ಚಿನ ಸಾವು-ನೋವು ಉಂಟಾಗಿದೆ. ರಾಷ್ಟ್ರಾಧ್ಯಕ್ಷ ಡೇನಿಯಲ್ ಓರ್ಟೆಗಾ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಎನ್ ಸಾಲ್ವಡಾರ್ ಪ್ಯುರ್ಟೊ ಟ್ರ್ಯುನ್‍ಫೋದಿಂದ ವಾಯುವ್ಯಕ್ಕೆ 154 ಕಿಲೋಮೀಟರ್‍ಗಳ ದೂರದಲ್ಲಿ ಸಾಗರದ ಗರ್ಭದ 33 ಕಿ.ಮೀ. ಒಳಗೆ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇ ಇಲಾಖೆ ಹೇಳಿದೆ.  ಕೆರೆಬಿಯನ್ ಕರಾವಳಿ ಪ್ರದೇಶದ ಎಲ್ ಸಾಲ್ವಡಾರ್, ನಿಕರಾಗುವಾ ಮತ್ತು ಕೋಸ್ಟಾರಿಕಾ ರಾಷ್ಟ್ರಗಳ ಕೆಲವು ಭಾಗಗಳಲ್ಲಿ ಭೂಕಂಪಕದ ನಂತರ ಪ್ರಬಲ ಚಂಡಮಾರುತದೊಂದಿಗೆ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ, ಪ್ರವಾಹದ ಭೀತಿಯೂ ಎದುರಾಗಿದೆ. ಈ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸರಣಿ ನೈಸರ್ಗಿಕ ವಿಕೋಪಗಳ ಪರಿಸ್ಥಿತಿಯನ್ನು ನಿಭಾಯಿಸಲು ರಕ್ಷಣಾ ಪಡೆಗಳು ಸನ್ನದ್ಧವಾಗಿವೆ.  ಜಪಾನ್‍ನ ಉತ್ತರ ಭಾಗದಲ್ಲಿ ಮೊನ್ನೆ ಭಾರೀ ಭೂಕಂಪ ಸಂಭವಿಸಿದ್ದು, ಅದರ ಹಿಂದೆಯೇ ದೊಡ್ಡ ಸುನಾಮಿ ಅಲೆ ಅಪ್ಪಳಿಸಿತ್ತು ಇದರಿಂದಾಗಿ ಆ ಭಾಗದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin