ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಅರಮನೆಯಲ್ಲಿ ವೈ-ಫೈ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

WiFi

ಮೈಸೂರು,ನ.25- ಪ್ರವಾಸಿಗರ ಅನುಕೂಲಕ್ಕಾಗಿ ಅರಮನೆಯ ಸುತ್ತ ಶೀಘ್ರದಲ್ಲೇ ಉಚಿತ ವೈ-ಫೈ ಸೇವೆ ಆರಂಭಿಸುವುದಾಗಿ ಬಿಎಸ್‍ಎನ್‍ಎಲ್‍ನ ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಜಯರಾಮ್ ತಿಳಿಸಿದರು. ಅರಮನೆಗೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಸುತ್ತ 7 ಸ್ಥಳಗಳಲ್ಲಿ ವೈ-ಫೈ ಸೇವೆ ಕಲ್ಪಿಸಲಾಗುವುದು ಎಂದರು. ಈಗಾಗಲೇ ಹೆಚ್ಚಿನ ಜನಸಂದಣಿ ಇರುವ ಜಯಚಾಮರಾಜೆಂದ್ರ ಮೃಗಾಲಯದಲ್ಲಿ ವೈ-ಫೈ ಕಲ್ಪಿಸಲಾಗಿದ್ದು, ಅದೇ ರೀತಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೂ ಕೂಡ ವೈ-ಫೈ ಅಳವಡಿಸಲಾಗಿದೆ. ಹಾಗಾಗಿ ಅರಮನೆಯಲ್ಲಿಯೂ ಅತೀ ಶೀಘ್ರದಲ್ಲಿ ವೈ-ಫೈ ಅಳವಡಿಸಲಾಗುವುದು ಎಂದು ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin