ರೈಲಿಗೆ ಸಿಕ್ಕಿ ಯುವಕ ಸಾವು : ವಾರಸುದಾರರ ಪತ್ತೆಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

rail

ತುಮಕೂರು,ನ.25- ಅಪರಿಚಿತ ಯುವಕನೊಬ್ಬ ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ತುಮಕೂರು ಮತ್ತು ಮಲ್ಲಸಂದ್ರ ರೈಲ್ವೆ ನಿಲ್ದಾಣಗಳ ಮಾರ್ಗದ ಮಧ್ಯೆ ಇಂದು ಬೆಳಗ್ಗೆ ನಡೆದಿದೆ.ಮೃತ ದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸುಮಾರು 20 ವರ್ಷದ ಯುವಕ, 160 ಸೆಂ.ಮೀ ಎತ್ತರ, ಕೋಲುಮುಖ, ಎಣ್ಣೆಗಂಪು ಮೈಬಣ್ಣ, ಚಿಗುರು ಗಡ್ಡ ಮೀಸೆ ಹೊಂದಿದ್ದಾನೆ. ಕೊರಳಿನಲ್ಲಿ ಕೇಸರಿ ಬಣ್ಣದ ರುದ್ರಾಕ್ಷಿ ಮಣಿ, ಸಾಧಾರಣ ನೀಲಕಾಯ ಶರೀರ, ಕಾಫಿ ಬಣ್ಣದ ವಿಂಟೇಜ್ ಮೋಟಾರ್ ಸೈಕಲ್ ಎಂಬ ಇಂಗ್ಲಿಷ್ ಹೆಸರು ಹೊಂದಿರುವ ಅರ್ಧತೋಳಿನ ಟೀಶರ್ಟ್ ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಮೃತನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ರೈಲ್ವೆ ಪೆÇಲೀಸ್ 9480802118 ಅಥವಾ ಸಬ್‍ಇನ್‍ಸ್ಪೆಕ್ಟರ್ ಭೀಮಣ್ಣ 9480802142 ಸಂಪರ್ಕಿಸಲು ಕೋರಲಾಗಿದೆ.

 

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin