ಹರಿಯುವ ನದಿಯಲ್ಲಿ ವಿದ್ಯುತ್ ತಂತ್ರಜ್ಞಾನ ರಾಜ್ಯದಲ್ಲಿ ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar----02

ಬೆಳಗಾವಿ, ನ.25- ಹರಿಯುವ ನದಿಯಲ್ಲಿ ಚಿಕ್ಕ ಚಿಕ್ಕ ಜಲ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ರೂಪಿಸಲು ಸಾಧ್ಯವಿರುವ ಬಗ್ಗೆ ವಿದೇಶದಲ್ಲಿ ಅಧ್ಯಯನ ಮಾಡಿಕೊಂಡು ಬಂದಿದ್ದು, ಇದನ್ನು ರಾಜ್ಯದಲ್ಲೂ ಜಾರಿಗೆ ತರುವ ಪ್ರಯತ್ನ ನಡೆಸುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ನಾಗಮಂಗಲ ಕ್ಷೇತ್ರದ ಶಾಸಕ ಚೆಲುವರಾಯಸ್ವಾಮಿ ಅವರ ಪರವಾಗಿ ರಮೇಶ್ ಬಂಡಿಸಿದ್ದೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2014-21ರ ಸೌರಶಕ್ತಿ ನೀತಿ ಅನ್ವಯ 6322.36 ಮೆಗಾವ್ಯಾಟ್ ಸಾಮಥ್ರ್ಯದ ಸೋಲಾರ್ ವಿದ್ಯುತ್ ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸ್ಪರ್ಧಾತ್ಮಕ ಬಿಡ್ ಮೂಲಕ 1855, ಭೂಮಾಲೀಕ, ರೈತರ ವರ್ಗದಲ್ಲಿ 306, ಸ್ವತಂತ್ರ ವಿದ್ಯುತ್ ಉತ್ಪಾದಕರ ವರ್ಗಕ್ಕೆ 843.36, ಸೋಲಾರ ಎನರ್ಜಿ ಕಾರ್ಪೊರೇಷನ್  ಆಫ್ ಇಂಡಿಯಾ ಯೋಜನೆಯಡಿ 970 ಮೆಗಾವ್ಯಾಟ್, ಸೋಲಾರ್ ಪಾರ್ಕ್ ಯೋಜನೆಯಡಿ 348, ಪಾವಗಡ ಸೋಲಾರ್ ಪಾರ್ಕ್‍ನಲ್ಲಿ 2ಸಾವಿರ ಮೆಗಾವ್ಯಾಟ್ ಸೇರಿ 6ಸಾವಿರ ಮೆಗಾವ್ಯಾಟ್‍ಗೂ ಹೆಚ್ಚು ವಿದ್ಯುತ್ ಉತ್ಪಾದಿಸುವ ಗುರಿ ಇದೆ.

ನಮ್ಮ ಸರ್ಕಾರದ ಅವಧಿಯೊಳಗೆ 5ಸಾವಿರ ಮೆಗಾವ್ಯಾಟ್ ಜಲ ವಿದ್ಯುತ್ ಉತ್ಪಾದಿಸುವ ಗುರಿ ಇದೆ. ರಾಜ್ಯದ ಆಯ್ದ 60 ತಾಲ್ಲೂಕುಗಳಲ್ಲಿ ತಲಾ 20 ಮೆಗವ್ಯಾಟ್ ಸಾಮಥ್ರ್ಯದ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಆಹ್ವಾನಿಸಲಾಗಿದ್ದು, ಇದರಡಿ 1150 ಮೆಗಾ ವ್ಯಾಟ್ ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ ಮಂಡ್ಯ ಜಿಲ್ಲೆಯ, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆ ಸೇರಿ 5 ತಾಲ್ಲೂಕುಗಳು ಒಳಗೊಂಡಿವೆ ಎಂದು ಹೇಳಿದರು. ರಾಜ್ಯದ ಚಿತ್ರದುರ್ಗ, ದಾವಣಗೆರೆ, ಗದಗ, ಬಳ್ಳಾರಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 3146 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನಾ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವುದಾಗಿ ಡಿಕೆಶಿ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin