ಅಧಿವೇಶನಕ್ಕೆ ಬಿಡುವು, ಸುವರ್ಣಸೌಧ ಬಣ ಬಣ

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha-0003

ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಪ್ರತಿಭಟನೆ, ಘೋಷಣೆ, ಕೂಗಾಟ, ಮುತ್ತಿಗೆ, ಜನಜಂಗುಳಿ ಹಾಗೂ ಪೊಲೀಸರ ಸರ್ಪಗಾವಲಿನಿಂದ ತುಂಬಿದ್ದ ಸುವರ್ಣಸೌಆದ ಹಾಗೂ ಸುತ್ತಮುತ್ತಲಿನ ಪ್ರದೇಶ ಮೂರು ದಿನಗಳ ಬಿಡುವಿನ ಹಿನ್ನೆಲೆ ಶನಿವಾರ ಬಣಗುಡುತ್ತಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮೆಲ್ಲ ಸಮಸ್ಯೆ ಮತ್ತು ದುಮ್ಮಾನಗಳಿಗೆ ಸಾಂತ್ವನ ಪರಿಹಾರ ಕಂಡುಕೊಳ್ಳುವ ಜತೆಜತೆಗೆ ಸರಕಾರ ಕರ್ತಔಯದಿಂದ ಪೂರೈಸಬೇಕಾದ ಅಭೀವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಸಲಹೆ ಸೂಚನೆ ನೀಡಿ ಒತ್ತಾಯಿಸುವ ಹಕ್ಕು ಜನಸಾಮಾಣ್ಯ ಪ್ರಭುಗಳು ಹೊಂದಿರುವುದು ತಿಳಿದ ವಿಷಯ.ನಾಗರಿಕರು, ಸಂಘ. ಸಂಸ್ಥೆಗಳು, ಗುಂಪುಗಳು, ವ್ಯಕ್ತಿಗಳು, ರಾಜಕೀಯ ಪಕ್ಷಗಳು, ಹಾಗೂ ನಾನಾ ಭಂಗಿಯ ಪ್ರತಿಭಟನೆಗಳನ್ನು ಕಳೆದ 5ದಿನಗಳಿಂದ ಆರಂಭಿಸಿದ್ದರು. ಅದರಲ್ಲಿ ಕೆಲವರದ್ದು ಉಗ್ರಪ್ರತಿಭಟನೆ, ಮೌನಪ್ರತಿಭಟನೆ, ವ್ಯಕ್ತಿಗತ ಪ್ರತಿಭಟನೆ ಮತ್ತು ಧರಣಿ ಸತ್ಯಾಘ್ರಹಗಳು ಸರಕಾರದ ಸತ್ವ ಪರೀಖ್ಷೆ ಮಾಡಿ ಘಂಗಾಬಲ ಉಡುಗಿಸಿದರೆ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೀಕಲಾಟಕ್ಕೆ ತಳ್ಳಿತ್ತು.

ಸರಕಾರದ ವಿವಿಧ ಹಗರಣ, ವಿಫಲತೆ, ನೀತಿ ನಿಯಮ ಹಾಗೂ ಅಧಿಕಾರಸ್ಥರ ಸಾರ್ವಜನಿಕ ಜೀವನದ ನ್ಯೂನ್ಯತೆಗಳನ್ನು ಮುಂದೆ ಮಾಡಿಕೊಂಡು ಮಾಜಿ ಅಧಿಕಾರಸ್ಥರು, ವಿರೋಧ ಪಕ್ಷದ ಮುಖಂಡರು, ಸಾಮಾಜಿಕ ಸಂಘಟನೆಗಳು ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಸೇರಿ ಉಗ್ರ ಪ್ರತಿಭಟನೆಯ ಮೂಲಕ ತಮ್ಮ ಕರ್ತವ್ಯ ನಿಭಾಯಿಸಿದರು. ತಮ್ಮ ವ್ಯವಸಾಯ, ಉದ್ಯೋಗ, ವ್ಯಾಪಾರಕ್ಕೆ ಸರಕಾರದ ನಿರ್ಲಕ್ಷ್ಯ ಧೋರಣೆ, ವಿಳಂಬತನ, ಕೆಲ ಲಾಭಿಗಳಿಗೆ ಸರಕಾರ ತಲೆ ಬಾಗುತ್ತಿದೆ. ತಾನೇ ಮಾಡಿದ ಕಾನೂನುಗಳ ಸರ್ಪಕ ಜಾರಿಗೆ ಸರಕಾರಕ್ಕೆ ಗಡಸುತನವಿಲ್ಲ ಎಂದೆಲ್ಲ ಇಲ್ಲಿನ ಸುವರ್ಣಗಾರ್ಡನ್ ನಲ್ಲಿ ನಡೆದ ಪ್ರತಿಭಟನೆ, ಹರತಾಳಗಳಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಿರಾಳರಾದರು. ಅಧಿವೇಶನದ ದಿನದಿಂದ ಸುಂದರವಾಗಿ ಕಂಗೊಳಿಸಿದ ಬೆಳಗಾವಿ ನಗರ ತನ್ನ ಶಕ್ತಿಗೂ ಮೀರಿ ಪರ ಊರಿನ ಗಣ್ಯ ಅತಿಥಿಗಳನ್ನು ಸಲುಹಿದ ನಗರವೀಗ ದಿಢೀರನೇ ಜನ ಹಾಗೂ ವಾಹನದಟ್ಟಣೆಯಿಂದ ನಿರಾಳವಾಗಿದೆ. ಗಣಗಾಂಭಿರ್ಯದಿಂದ ಈಡಾಡುತ್ತಿದ್ದ ಕೆಂಪುಗೂಟದ ಕಾರುಗಳಿಲ್ಲ.

ಬೆಳಗಾವಿ ನಮಗೇ ಸೇರಬೇಕು ಎಂಬ ಒತ್ತಾಯದಿಂದ ಇಲ್ಲಿ ಜೀವನ ಸಾಗಿಸುತ್ತಿರುವ ಮರಾಠಿಗರು ಮಹಾಮೇಳಾವ್ ಹೆಸರನಲ್ಲಿ ಸರಕಾರದ ವಿರುದ್ಧವೇ ಸೆಡ್ಡು ಹೊಡೆದ ಪ್ರಸಂಗವೂ ನಡೆಯಿತು. ಇದಕ್ಕೆ ವಿರೋಧಿಸಿ ಕನ್ನಡ ಸಂಘಟನೆಗಳು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಆಕ್ರೋಶ ವ್ಯಕ್ತಪಡಿಸಿದರು. ಊದು ದಿನ ಸುವಣೌಸೌಧದೊಳಗೆ ಬಿಸಿಬಿಸಿ ಚರ್ಚೆಗಳು ನಡೆದರೆ ಹೊರಗೆ ಪ್ರತಿಭಟನೆಗಳ ಸಾಲು ಸಾಲುಗಟ್ಟಿದ್ದವು. ಅಧಿವೇಶನದ ಬಿಡುವಿಲ್ಲದ ಕಾರ್ಯಒತ್ತಡದ ಆಯಾಸ ನೀಗಲು ಜನಪ್ರತಿನಿಧಿಗಳು, ಅಧಿಕಾರಿಗಳು ಪತ್ರಕರ್ತರು ಗಣ್ಯರು ನೆರೆಯ ಕೊಲ್ಲಾಪುರ ಮಹಾಲಕ್ಷ್ಮೀ, ಯಲ್ಲಮ್ಮ ಗುಡ್ಡ ಮತ್ತಿತರ ಧಾರ್ಮಿಕ ಕ್ಷೇತ್ರಗಳಗೆ ತೆರಳಿದರೆ, ಗೋವಾ ಮಜ ಅನುಭವಿಸಲು, ದೂಧಸಾಗರನಂಥ ಜಲಪಾತ ಮತ್ತು ದಟ್ಟ ಕಾನನ ಸಿರಿ ಅನುಭವಿಸಲು ಇನ್ನಿತರ ಅತಿಥಿಗಳು ತೆರಳಿದರು. ಈ ಮಧ್ಯೆ ಉತ್ತರ ಕರ್ನಾಟಕದ ನೆಂಟರಿಷ್ಟರ ಮನೆಗೆ ಕೆಲವರು ತೆರಳುತ್ತಿದ್ದುದು ಕಂಡುಬಂತು. ಸೋಮವಾರ ನೋಟು ನಿಷೇಧದ ವಿರುದ್ದ ಭಾರತ ಬಂದ್ ಹಿನ್ನೆಲೆ ಅಧಿವೇಶನ ನಡೆಯದೇ ಮತ್ತೆ ಮಂಗಳವಾರ ಪ್ರಾರಂಭವಾಗಿ ಶನಿವಾರದವರೆಗೆ ಬಿಸಿಬಿಸಿ ಏರಿ ವಾತಾವರಣ ಬೆಳಗಾವಿ ಸುವರ್ಣಸೌಧ ಹಾಗೂ ನಗರದಲ್ಲಿ ರಂಗೇರಲಿದೆ.

 – ಜಿ. ಪುರುಷೋತ್ತಮ, ಬೆಳಗಾವಿ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin