ಕೋಸ್ಟಾರಿಕಾದಲ್ಲಿ ಚಂಡಮಾರುತದ ಆರ್ಭಟ

ಈ ಸುದ್ದಿಯನ್ನು ಶೇರ್ ಮಾಡಿ

Coastarica-harrycane-01

ಸ್ಯಾನ್ ಜೋಸ್, ನ.25-ದ್ವೀಪರಾಷ್ಟ್ರ ಕೋಸ್ಟಾರಿಕಾದ ಕೆರೆಬಿಯನ್ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಿರುವ ವಿನಾಶಕಾರಿ ಚಂಡಮಾರುತ, ಪ್ರವಾಹ ಮತ್ತು ಭೂಕುಸಿತದಿಂದ ಹಲವಾರು ಮಂದಿ ಮೃತಪಟ್ಟಿದ್ದಾರೆ.  ಪೆಸಿಫಿಕ್ ಮಹಾಸಾಗರದಲ್ಲಿ ನಿನ್ನೆ ಸಂಭವಿಸಿದ ಭಾರೀ ಭೂಕಂಪದಿಂದ ಎಲ್ ಸಾಲ್ವ ಡಾರ್, ನಿಕರಾಗುವಾ ಮತ್ತು ಕೋಸ್ಟಾರಿಕಾ ಕರಾವಳಿ ಪ್ರದೇಶಗಳಲ್ಲಿ ಭಾರೀ ಚಂಡಮಾರುತ ಅಪ್ಪಳಿಸಿದ್ದು, ಹಲವರು ಸಾವಿಗೀಡಾಗಿದ್ದರು.  ಕೋಸ್ಟಾರಿಕಾದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತದ ಹಿನ್ನೆಲೆಯಲಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. .

ಮಧ್ಯ ಅಮೆರಿಕದ ಪೆಸಿಫಿಕ್ ಮಹಾಸಾಗರದಲ್ಲಿ 7.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಕೆಲವು ನಿಮಿಷಗಳ ನಂತರ ಕೆರೆಬಿಯನ್ ಕರಾವಳಿಯ ಈ ಮೂರು ದೇಶಗಳ ಮೇಲೆ ಭೀಕರ ಚಂಡಮಾರುತ ಅಪ್ಪಳಿಸಿತ್ತು.  ಈ ದೇಶಗಳ ಕರಾವಳಿ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸರಣಿ ನೈಸರ್ಗಿಕ ವಿಕೋಪಗಳ ಪರಿಸ್ಥಿತಿಯನ್ನು ನಿಭಾಯಿಸಲು ರಕ್ಷಣಾ ಪಡೆಗಳು ಸನ್ನದ್ಧವಾಗಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin