ತನ್ನ ರಿಯಲ್ ಹೀರೋ ಫಿಡೆಲ್ ಕ್ಯಾಸ್ಟ್ರೋ ಕಟ್ಟಾ ಅಭಿಮಾನಿ ಈ ಬಾಲಕ…!

ಈ ಸುದ್ದಿಯನ್ನು ಶೇರ್ ಮಾಡಿ

l-Castro-Boy

ಹವಾನಾ, ನ.26-ದ್ವೀಪರಾಷ್ಟ್ರ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಕಟ್ಟಾ ಅಭಿಮಾನಿಯಾದ ಬಾಲಕನೊಬ್ಬ ತನ್ನ ಆರಾಧ್ಯ ದೈವನ ಸಾವಿನ ಸುದ್ಧಿ ಕೇಳಿ ದಿಗ್ಭ್ರಮೆಗೊಂಡಿದ್ದಾನೆ. ಈ ಬಾಲಕ ಇತ್ತೀಚೆಗೆ ತನ್ನ ಮನೆಯಲ್ಲಿ ಆರಾಧ್ಯದೈವನ ಗೌರವಾರ್ಥ ಫೋಟೋ ಪ್ರದರ್ಶನ ಮತ್ತು ಔತಣಕೂಟ ಆಯೋಜಿಸಿ ದೇಶಾದ್ಯಂತ ಸುದ್ದಿ ಮಾಡಿದ್ದ.
ಈ ಬಾಲಕನ ಹೆಸರು ಮಾರಿಯೊನ್ ಮೆಂಡೆಜ್. ಈತನಿಗೆ 10 ವರ್ಷ ವಯಸ್ಸು, ದ್ವೀಪರಾಷ್ಟ್ರ ಕ್ಯೂಬಾದ ಸ್ಯಾನ್ ಆಂಟೋನಿಯೊ ಡಿ ಲಾಸ್ ಬನೋಸ್ ಎಂಬ ಪುಟ್ಟ ಗ್ರಾಮ ಈತನ ಊರು. ಇವನು ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅಪ್ಪಟ ಅಭಿಮಾನಿ. ಆಗಸ್ಟ್ 13ರಂದು 90 ವರ್ಷಕ್ಕೆ ಕಾಲಿಟ್ಟ ಕ್ಯಾಸ್ಟ್ರೋ ಗೌರವಾರ್ಥ ತನ್ನ ಮನೆಯಲ್ಲಿ ಕೇಕ್ ಕಟ್ ಮಾಡಿ ತನ್ನ ಮೆಚ್ಚಿನ ನಾಯಕನಿಗೆ ಬರ್ತ್ ಡೇ ವಿಶ್ ಮಾಡಿದ್ದ.

ಈ ಬಾಲಕ ಕ್ಯಾಸ್ಟ್ರೋಗೆ ಸಂಬಂಧಪಟ್ಟ ಪೋಟೊಗಳು ಮತ್ತು ಇತರ ಸ್ಮರಣಿಕೆಗಳನ್ನು ಪ್ರದರ್ಶಿಸಿದ್ದಾನೆ. ಈತನಿಗೆ ಕ್ರಾಂತಿಕಾರಿ ನಾಯಕನ ಲೇಖನಗಳು ಮತ್ತು ಛಾಯಾಚಿತ್ರಗಳನ್ನು ಸಂಗ್ರಹಿಸುವ ಹವ್ಯಾಸ. ಮೆಂಡೆಜ್ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಸುಮಾರು 100 ಮಂದಿ ಸೇರಿದ್ದರು. ಅಭಿಮಾನ ಎಂದರೆ ಇದಲ್ಲವೇ ?

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin