ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ನಡುಗಿಸಿದ್ದ ಕ್ಯೂಬಾ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Fedal-Castro-02

ಹವಾನಾ, ನ.26-ವಿಶ್ವದ ದೊಡ್ಡಣ್ಣ ಅಮೆರಿಕವನ್ನೇ ನಡುಗಿಸಿದ್ದ ಉಕ್ಕಿನ ಸರದಾರ, ಮಹಾನ್ ಮಾನವತಾವಾದಿ ದ್ವೀಪರಾಷ್ಟ್ರ ಕ್ಯೂಬಾದ ಕ್ರಾಂತಿಕಾರಿ ನಾಯಕ ಮತ್ತು ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟೊ ಇನ್ನಿಲ್ಲ.  ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ 90ನೆ ಜನ್ಮದಿನ ಆಚರಿಸಿಕೊಂಡಿದ್ದ ಧೀಮಂತ ರಾಷ್ಟ್ರನಾಯಕ ಕ್ಯಾಸ್ಟ್ರೊ ನಿನ್ನೆ ರಾತ್ರಿ ವಿಧಿವಶರಾದರು. ಕ್ಯೂಬಾ ಅಧ್ಯಕ್ಷ ಹಾಗೂ ಅವರ ಸಹೋದರ ರಾಲ್ ಕ್ಯಾಸ್ಟ್ರೊ ಇಂದು ಬೆಳಗ್ಗೆ ರಾಷ್ಟ್ರೀಯ ದೂರದರ್ಶನದಲ್ಲಿ ಕ್ಯಾಸ್ಟ್ರೊ ನಿಧನ ವಾರ್ತೆಯನ್ನು ಪ್ರಕಟಿಸಿದರು. ಕ್ಯೂಬಾ ಕ್ರಾಂತಿಯ ಕಮಾಂಡರ್ ಇನ್ ಚೀಫ್ ಫಿಡೆಲ್ ಕ್ಯಾಸ್ಟ್ರೊ ಶುಕ್ರವಾರ ರಾತ್ರಿ 10.29ರಲ್ಲಿ ನಿಧನರಾದರು ಎಂದು ಅವರು ತಿಳಿಸಿದರು.

1959 ರಿಂದ 1976ರವರೆಗೆ ಕ್ಯೂಬಾ ಗಣರಾಜ್ಯದ ಪ್ರಧಾನಮಂತ್ರಿಯಾಗಿ ಹಾಗೂ 1976ರಿಂದ 2008ರವರೆಗೆ ರಾಷ್ಟ್ರಾಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಮಾಕ್ರ್ಸ್‍ವಾದಿ ಲೆನಿನ್ ವಾದಿ ನಾಯಕರೂ ಆಗಿದ್ದ ಕ್ಯಾಸ್ಟ್ರೊ 1961 ರಿಂದ 2011 ರವರೆಗೆ ಸುದೀರ್ಘ ಕಾಲ ಕ್ಯೂಬಾದ ಕಮ್ಯುನಿಸ್ಟ್ ಪಾರ್ಟಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ವಿಶ್ವ ನಾಯಕರಾಗಿ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾಗಿದ್ದ ಕ್ಯಾಸ್ಟ್ರೊ ಸಮಾಜವಾದಿ ಧುರೀಣರಾಗಿ, ಸಾಮ್ರಾಜ್ಯಶಾಹಿ ವಿರೋಧಿಯಾಗಿ ಮತ್ತು ಮಹಾಮಾನವತಾವಾದಿಯಾಗಿ ಲೋಕಪ್ರಿಯರಾಗಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin