26/11 ಮುಂಬೈ ದಾಳಿಗೆ 8 ವರ್ಷ, ಹುತಾತ್ಮರಿಗೆ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

26/11

ಮುಂಬೈ, ನ.26- ರಾಷ್ಟ್ರದ ವಾಣಿಜ್ಯ ರಾಜಧಾನಿಯ ಸಪ್ತತಾರಾ ತಾಜ್ ಹೋಟೆಲ್, ಸಿಎಸ್‍ಟಿ ರೈಲು ನಿಲ್ದಾಣ, ಭಾಬಾದ್ ಹೌಸ್ ಮತ್ತಿತರೆಡೆ ಗುಂಡಿನ ದಾಳಿ ನಡೆಸಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಬಲಿ ಬಲಿಪಡೆದ 26/11ರ ಮುಂಬೈ ಭಯೋತ್ಪಾದಕರ ದಾಳಿಯ ಕರಾಳ ನೆನಪಿಗೆ ಇಂದು ಎಂಟು ವರ್ಷ… ಭಯೋತ್ಪಾದಕರ ವಿರುದ್ದ ಹೋರಾಟದಲ್ಲಿ ಹುತಾತ್ಮರಾದ ಯೋಧರಿಗೆ ದೇಶದ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.  ದಕ್ಷಿಣ ಮುಂಬೈ ಪೊಲೀಸ್ ಜಿಮ್‍ಖಾನಾದಲ್ಲಿ 26/11 ಪೊಲೀಸ್ ಸ್ಮಾರಕಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕ ಗಣ್ಯರು ಹುತಾತ್ಮರ ಗೌರವಾರ್ಥ ಪುಷ್ಪ ನಮನ ಸಲ್ಲಿಸಿದರು.

ಗೌರ್ನರ್ ವಿದ್ಯಾಸಾಗರ ರಾವ್, ಶಿವ ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥ ಸತೀಸ್ ಮಾಥುರ್, ಉನ್ನತ ಪೊಲೀಸ್ ಅಧಿಕಾರಿಗಳು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ನವೆಂಬರ್ 2008ರ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಕುಟುಂಬದವರೂ ಪಾಲ್ಗೊಂಡಿದ್ದರು.  ಸಮುದ್ರ ಮಾರ್ಗವಾಗಿ ಬಂದ ಪಾಕಿಸ್ತಾನದ ಲಷ್ಕರ್-ಎ-ತೋಯ್ಬಾ ಉಗ್ರಗಾಮಿ ಸಂಘಟನೆಯ 10 ಉಗ್ರರು ಇಂಡಿಯಾ ಗೇಟ್ ಮೂಲಕ ಭಾರತ ಪ್ರವೇಶಿಸಿದ್ದರು. ನಂತರ ತಾಜ್ ಹೋಟೆಲ್‍ನಲ್ಲಿ ಅವಿತು ನ.26 ರಿಂದ ನ.29ರವರೆಗೂ ನಿರಂತರ ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್, ಓಬೇರಾಯ್ ಟ್ರಿಡೆಂಟ್, ತಾಜ್ ಮಹಲ್ ಅಂಡ್ ಟವರ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ಜೆವಿಶ್ ಕಮ್ಯೂನಿಟಿ ಸೆಂಟರ್ ಭಯೋತ್ಪಾದಕರ ದಾಳಿಗೆ ತುತ್ತಾಗಿತ್ತು. 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರನ್ನು ಭಯೋತ್ಪಾದಕರು ಬಲಿ ಪಡೆದಿದ್ದರು. ಭಯೋತ್ಪಾದಕರ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿತ್ತು.

ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮುಖ್ಯಸ್ಥೆ ಹೇಮಂತ್ ಕರ್‍ಕರೆ, ಸೇನೆಯ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮುಖ್ಯ ಹೆಚ್ಚುವರಿ ಪೊಲೀಸ್ ಕಮಿಷನರ್ ಅಶೋಕ್ ಕಾಮ್ಟೆ ಮತ್ತು ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ವಿಜಯ್ ಸಾಲಸ್ಕರ್ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದವರಲ್ಲಿ ಪ್ರಮುಖರಾಗಿದ್ದಾರೆ.  ಈ ವೇಳೆ ದಾಳಿಯ ರೂವಾರಿ ಮಹಮದ್ ಅಜ್ಮಲ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದ. ಉಳಿದ 9 ಉಗ್ರರು ಹೋಟೆಲ್‍ನಲ್ಲೇ ಹತರಾಗಿದ್ದರು. ಬಳಿಕ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಕಸಬ್‍ನನ್ನು 2012ರಲ್ಲಿ ಗಲ್ಲಿಗೇರಿಸಲಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin