ಆರ್‍ಜಿವಿ ನೇತೃತ್ವದಲ್ಲಿ ಅಬ್ ಕೀ ಬಾರ್ ಅಮಿತಾಭ್ ಸರ್ಕಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Amitab-Sarkaar

ಬಾಲಿವುಡ್ ಸೂಪರ್‍ಸ್ಟಾರ್ ಅಮಿತಾಭ್ ಬಚ್ಚನ್ ಅಸಂಖ್ಯಾತ ಅಭಿಮಾನಿಗಳಿಗೊಂದು ಸಂತತದ ಸುದ್ದಿ. ವಯೋಮಾನಕ್ಕೆ ಅನುಗುಣವಾದ ಪಾತ್ರ ಪೋಷಣೆ ಮೂಲಕ ನಟನೆಯಲ್ಲಿ ಪರಿಪಕ್ವವಾಗಿರುವ ಬಿಗ್-ಬಿ ಬಚ್ಚನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸರ್ಕಾರ್-3 ಮುಂದಿನ ವರ್ಷ ಮಾರ್ಚ್ 17ರಂದು ತೆರೆಕಾಣಲಿದೆ.   ಖ್ಯಾತ (ಕ್ಯಾತೆ) ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಸರ್ಕಾರ್ ಆಗಮನದ ದಿನಾಂಕವನ್ನು ಪ್ರಕಟಿಸಿದ್ದಾರೆ. ವಿವಾದಗಳ ಮೂಲಕ ಕುಖ್ಯಾತಿ ಯನ್ನೂ ಪಡೆದಿರುವ ಆರ್‍ಜಿವಿ ಈ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಪದಗಳು ಆಕರ್ಷಕವಾಗಿದೆ. ಬೀವೇರ್ ಮಿಸ್ಟರ್ ಮೋದಿ, ಅಬ್ ಕೀ ಬಾರ್ ಅಮಿತಾಭ್ ಸರ್ಕಾರ್- ಇದು ಆರ್‍ಜಿವಿಯ ಹೊಸ ಟ್ಯಾಗ್ ಲೈನ್.

ಶಿವಸೇನಾ ನಾಯಕ ಬಾಳ್ ಠಾಕ್ರೆ ಸ್ಫೂರ್ತಿಯಿಂದ ನಿರ್ಮಾಣವಾದ ಸರ್ಕಾರ್ ಸಿನಿಮಾದ ಈ ಹಿಂದಿನ ಎರಡು ಸರಣಿಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದವು. ಈಗ ಮೂರನೇ ಭಾಗ ಮಾರ್ಚ್ 17ರಂದು ಬಿಡುಗಡೆಯಾಗಲಿದೆ. ಸುಭಾಷ್ ನಾಗ್ರೆ ಪಾತ್ರದಲ್ಲಿ ಮತ್ತೆ ಮಿಂಚಲಿದ್ದಾರೆ. ಜಾಕೀ ಶ್ರಾಫ್, ಮನೋಜ್ ಬಾಜಪೇಯಿ, ಯಾಮಿ ಗೌತಮ್ ಚಿತ್ರದ ಪ್ರಮುಖ ಪಾತ್ರದಲ್ಲಿ ದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin