ಭಾರತ್ ಬಂದ್ ಗೆ ಲಾರಿ ಮಾಲೀಕರ ಬೆಂಬಲವಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Lorry-Shanmugappa

ಬೆಂಗಳೂರು, ನ.27-ಐನೂರು, ಸಾವಿರ ರೂ. ನೋಟುಗಳನ್ನು ರದ್ದು ಮಾಡಿರುವುದರಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆಯನ್ನು ಸರಿಯಾಗಿ ನಿರ್ವಹಣೆ ಮಾಡದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಪ್ರತಿಪಕ್ಷಗಳು ನಾಳೆ (ನ.28) ಕರೆಕೊಟ್ಟಿರುವ ಆಕ್ರೋಶ್ ದಿವಸ್ ಆಚರಣೆಗೆ ಲಾರಿ, ಟ್ಯಾಕ್ಸಿ , ಟೆಂಪೋ , ಬಸ್ ಮಾಲೀಕರು ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.
ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ಒಕ್ಕೂಟಗಳ ಅಧ್ಯಕ್ಷ ಷಣ್ಮುಗಪ್ಪ ಈ ಸಂಬಂಧ ಈ ಸಂಜೆಯೊಂದಿಗೆ ಮಾತನಾಡಿ, ಲಾರಿಗಳಿಗೆ ಕೇಂದ್ರ ಸರ್ಕಾರ ಟೋಲ್ ಫ್ರೀ ಮಾಡಿದೆ ಮತ್ತು ಪೆಟ್ರೋಲ್ ಬಂಕ್‍ಗಳಲ್ಲಿ ಡಿ.15ರವರೆಗೆ ಹಳೆಯ ಐನೂರು, ಸಾವಿರ ನೋಟುಗಳನ್ನು ಸ್ವೀಕರಿಸುತ್ತಿದೆ. ಹೀಗಾಗಿ ಲಾರಿ ಮಾಲೀಕರಿಗೆ ಯಾವುದೇ ತೊಂದರೆಯಾಗಿಲ್ಲ. ನಾವು ನಾಳಿನ ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.


ನೋಟ್ ಬ್ಯಾನ್ ಖಂಡಿಸಿ ಕರೆಕೊಟ್ಟಿರುವ ಭಾರತ್ ಬಂದ್ ಗೆ ನಿಮ್ಮ ಬೆಂಬಲವಿದೆಯೇ ..?

View Results

Loading ... Loading ...

ಯಥಾಸ್ಥಿತಿ ಲಾರಿಗಳು, ಟೆಂಪೋ ಮಿನಿಗೂಡ್ಸ್ ಲಾರಿಗಳು ಸಂಚರಿಸಲಿವೆ ಎಂದು ಅವರು ತಿಳಿಸಿದ್ದಾರೆ.  ಡಿ.31ರವರೆಗೆ ಟೋಲ್‍ಫ್ರೀ ಮಾಡಬೇಕೆಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಆ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.  ಈಗಾಗಲೇ ನಮಗೆ ಪೆಟ್ರೊ ಕಾರ್ಡ್‍ಗಳನ್ನು ನೀಡಲಾಗಿದೆ. ಲಾರಿಗಳಿಗೆ ಡೀಸೆಲ್ ಹಾಕಿಸಿಕೊಳ್ಳಲು ಯಾವುದೇ ತೊಂದರೆ ಇಲ್ಲ. ಶೇ.60ರಷ್ಟು ಲಾರಿ ಮಾಲೀಕರು ಪೆಟ್ರೋ ಕಾರ್ಡ್‍ಗಳನ್ನು ಮಾಡಿಸಿಕೊಂಡಿದ್ದಾರೆ. ಇನ್ನುಳಿದವರು ಕೂಡ ಪೆಟ್ರೋ ಕಾರ್ಡ್‍ಗಳನ್ನು ಕೊಳ್ಳಬೇಕಿದೆ ಎಂದರು.
ನೋಟು ಬ್ಯಾನ್‍ನಿಂದ ವ್ಯಾಪಾರ-ವಹಿವಾಟುಗಳಲ್ಲಿ ಸ್ವಲ್ಪ ವ್ಯತ್ಯಯವಾಗಿರುವುದರಿಂದ ನಮ್ಮ ಲಾರಿಗಳ ಓಡಾಟ ಕೊಂಚ ತಗ್ಗಿದೆ. ಅದನ್ನು ಬಿಟ್ಟರೆ ಮಾಮೂಲಿಯಂತೆ ಲಾರಿಗಳ ಓಡಾಟ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಪ್ರತಿದಿನ ದೇಶಾದ್ಯಂತ 40 ಲಕ್ಷ ಗಾಡಿಗಳು ಓಡಾಡುತ್ತವೆ. 15 ದಿವಸ ಟೋಲ್‍ನ್ನು ಕೇಂದ್ರ ಸರ್ಕಾರ ಫ್ರೀ ಮಾಡಿದೆ ಪ್ರತಿದಿನ ಟೋಲ್‍ನಿಂದ ಸುಮಾರು 50 ಕೋಟಿಯಷ್ಟು ಹಣ ಬರುತ್ತದೆ. ಈ ಹಣವನ್ನು ಕೇಂದ್ರ ಸರ್ಕಾರ ಟೋಲ್‍ನವರಿಗೆ ಕೊಡಬೇಕು.  ಒಟ್ಟಾರೆ ದೇಶದ ಎಲ್ಲ ಟೋಲ್‍ಗಳನ್ನು ಫ್ರೀ ಮಾಡಬೇಕೆಂದು ಒತ್ತಾಯಿಸಿದ ಅವರು, ಡೀಸೆಲ್ ಮೇಲೆ 1.5 ರೂ. ಸೆಸ್ ವಿಧಿಸಿ ಅದರಿಂದ ಬರುವ ಹೆಚ್ಚುವರಿ ಹಣವನ್ನು ಟೋಲ್‍ನವರಿಗೆ ನೀಡಿ ಎಲ್ಲ ಟೋಲ್‍ಗಳನ್ನು ಫ್ರೀ ಮಾಡಬೇಕೆಂದು ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin