ಭೀಮಾನದಿಗೆ ಮಕ್ಕಳನ್ನು ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ವಿಜಯಪುರ, ನ.27-ಕೌಕುಂಬಿಕ ಕಲಹದಿಂದ ತಾನೆತ್ತ ಇಬ್ಬರು ಮಕ್ಕಳನ್ನು ನಿರ್ಧಯವಾಗಿ ನದಿಗೆ ಎಸೆದು ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಇಂಡಿ ತಾಲ್ಲೂಕಿನ ಅಗರಖೇಡ ಬಳಿ ನಡೆದಿದೆ. ಇಲ್ಲಿ ಹರಿಯುವ ಭೀಮಾನದಿಯಲ್ಲಿ ಮಹಿಳೆಯ ಶವ ಮರದ ಕೊಂಬೆಯೊಂದಕ್ಕೆ ಸಿಕ್ಕಿ ತೇಲುತ್ತಿರುವುದನ್ನು ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಶನಿವಾರ ಸಂಜೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಗ್ನಿ ಶಾಮಕ ಸಿಬ್ಬಂದಿಯ ನೆರವಿನೊಂದಿಗೆ ಶವವನ್ನು ನೀರಿನಿಂದ ಹೊರತೆಗೆದು ಪರಿಶೀಲಿಸಿ ತನಿಖೆ ಕೈಗೊಂಡಾಗ ಮೃತಳು ಸ್ಥಳೀಯ ಗ್ರಾಮದವರೆ ಎಂದು ತಿಳಿದು ಬಂದಿದೆ. ಈಕೆ ಕಳೆದ ಶುಕ್ರವಾರ ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಜ್ಯೋತಿ ಭೋಸ್ಲೆ (32) ಎಂದು ಗುರುತಿಸಲಾಗಿದೆ. ನದಿಗೆ ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು ಮಕ್ಕಳಿಗಾಗಿ ನದಿಯಲ್ಲಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಇಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin