ಗೋಮಾತೆ ಎಲ್ಲರ ತಾಯಿ : ಶ್ರೀ ರಾಘವೇಶ್ವರ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

raghavendra

ಚಿಕ್ಕಮಗಳೂರು ನ.27 ಗೋಮಾತೆಯ ಹಾಲನ್ನು ಕುಡಿದು ಬೆಳೆದ ಮನುಷ್ಯ ರಾಕ್ಷಸನಾಗಿ ಇಂದು ಗೋಮಾತೆಯನ್ನೇ ಕಸಾಯಿ ಖಾನೆಗೆ ಅಟ್ಟುತ್ತಿರುವುದು ಅಧಃಪತನದ ಪರಮಾವಧಿ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿಷಾದಿಸಿದರು. ವಿಶ್ವಮಂಗಳ ಗೋಯಾತ್ರೆ ಅಂಗವಾಗಿ ನಗರ ಹೊರವಲಯದ ತೇಗೂರಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯನಿಗೆ ಹಾಲು, ಮೊಸರು, ಬೆಣ್ಣೆ, ತುಪ್ಪ, ಆಹಾರ ಸೇರಿದಂತೆ ಎಲ್ಲವನ್ನೂ ಕೊಡುವುದು ಗೋಮಾತೆ, ಎಲ್ಲರ ತಾಯಿಯರ ತಾಯಿ ಗೋಮಾತೆ, ಅಮ್ಮ ನಿಮಗೆ ಹಾಲು ಕುಡಿಸಿ ಬೆಳೆಸಿದ್ದಾಳೆ ಆದರೆ ಅವಳಿಗೆ ಹಾಲು ಕೊಟ್ಟಿದ್ದು ಗೋಮಾತೆ. ಗೋವಿನ ತ್ಯಾಜ್ಯ ಭೂಮಿಗೆ ಪೂಜ್ಯ ಗೋವಿನ ಮೂತ್ರ ಮತ್ತು ಸಗಣಿಯಿಂದ ಭೂಮಿ ಫಲವತ್ತತೆಯಾಗುತ್ತದೆ ಹೀಗಾಗಿ ಗೋಮಾತೆ ಎಲ್ಲರ ತಾಯಿ ಎಂದರು.

ರೈತರ ಜೀವನಾಡಿಯಾಗಿ ಕೇಳಿದ್ದೆಲ್ಲವನ್ನೂ ಕೊಡುವ ಕಾಮಧೇನುವಿನ ರಕ್ತ ಇಂದು ಸಮುದ್ರದಷ್ಟು ಹರಿಯುತ್ತಿದೆ ಪವಿತ್ರ ಗೋವುಗಳು ಕಸಾಯಿ ಖಾನೆಗಳ ಪಾಲಾಗುತ್ತಿವೆ ಇದರಿಂದಾಗಿ ದೇಶೀಯ ಅಪರೂಪದ ಗೋತಳಿಗಳು ನಾಶವಾಗುತ್ತಿವೆ ಎಂದು ವಿಷಾದಿಸಿದ ಅವರು ಗೋಮಾತೆಯ ರಕ್ಷಣೆಗೆ ನಾವೆಲ್ಲರೂ ಬದ್ದವಾಗಿರುತ್ತೇವೆ ಎಂದು ನೆರೆದಿದ್ದ ರೈತರಿಂದ ಪ್ರಮಾಣ ಮಾಡಿಸಿದರು.ಬಸವ ಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ ಮಾತನಾಡಿ, ರೈತರು ವಯಸ್ಸಾದ ಗೋವುಗಳನ್ನು ಕಸಾಯಿ ಖಾನೆಗಳಿಗೆ ತಳ್ಳುವ ಬದಲು ವೃದ್ದ ತಂದೆ ತಾಯಿಗಳ ಜೊತೆ ಮನೆಯಲ್ಲೇ ಸಾಕಿ ಸಲಹಬೇಕು ಎಂದು ಕಿವಿಮಾತು ಹೇಳಿದರು.

ಭೈೀರುಗಂಡಿ ಮಠದ ಶ್ರೀ ರೇಣುಕ ಮಹಾಂತೇಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 33 ಕೋಟಿ ದೇವತೆಗಳು ಗೋವುಗಳಲ್ಲಿ ವಾಸಿಸುತ್ತಾರೆ ಅವುಗಳನ್ನು ಸಾಕುವುದರಿಂದ ಆ ಎಲ್ಲಾ ದೇವತೆಗಳ ಆಶೀರ್ವಾದ ನಿಮಗೆ ದೊರೆಯುತ್ತದೆ ಎಂದು ಹೇಳಿದರು.ರಾಮಚಂದ್ರಾಪುರ ಮಠದ ಅಧಿಕಾರಿ ಕೆ.ಟಿ.ವೆಂಕಟೇಶ್, ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಭಟ್, ರಥ ಯಾತ್ರೆ ಪ್ರಮುಖ್ ಮಧುಗೋಮತಿ, ಶ್ರೀಮಠದ ಗೋಶಾಲೆ ಕಾರ್ಯದರ್ಶಿ ಶ್ರೀಕೃಷ್ಣ ಉಪಸ್ಥಿತರಿದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin