ಜನಜೀವನದ ಮೇಲೆ ಪರಿಣಾಮ ಬೀರದ ವಿಪಕ್ಷಗಳ ‘ಆಕ್ರೋಶ’

ಈ ಸುದ್ದಿಯನ್ನು ಶೇರ್ ಮಾಡಿ

BMTC-001

ಬೆಂಗಳೂರು,ನ.28-ನೋಟು ರದ್ದು ಮಾಡಿದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಕರೆ ನೀಡಿದ್ದ ಆಕ್ರೋಶ್ ದಿವಸ್ ಪ್ರತಿಭಟನೆ ರಾಜ್ಯದಲ್ಲಿ ಯಾವುದೇ ಪರಿಣಾಮ ಬೀರದಿರುವುದು ಜನತೆಯ ಆತಂಕವನ್ನು ದೂರ ಮಾಡಿದೆ.   ಜನರಲ್ಲಿ ಉಂಟಾಗಿದ್ದ ಬಂದ್ ಆತಂಕ ಬೆಳಗ್ಗೆಯೇ ದೂರವಾಗಿ ಎಂದಿನಂತೆ ತಮ್ಮ ಚಟುವಟಿಕೆಯಲ್ಲಿ ತೊಡಗಿದ್ದು , ರಾಜ್ಯಾದ್ಯಂತ ಕಂಡುಬಂದಿದೆ. ಕೆಎಸ್‍ಆರ್‍ಟಿಸಿ, ಈಶಾನ್ಯ, ವಾಯುವ್ಯ, ರಸ್ತೆ ಸಾರಿಗೆ ಬಸ್‍ಗಳು, ಟ್ಯಾಕ್ಸಿಗಳು, ಆಟೋಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾರ್ವಜನಿಕರ ದೈನಂದಿನ ಓಡಾಟಕ್ಕೆ ಯಾವುದೇ ವ್ಯತ್ಯಯವಾಗಿಲ್ಲ. ಇದರ ನಡುವೆ ಬಹುತೇಕ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು , ವಿಶೇಷವಾಗಿ ಮೈಸೂರು ವಿವಿಯ ಪರೀಕ್ಷೆಗಳು ಕೂಡ ನಿರಾಂತಕವಾಗಿ ನಡೆದು ಮುಕ್ತಾಯಗೊಂಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ವಿಮಾನಗಳ ಹಾರಾಟ ನಡೆದಿತ್ತು. ಯಾವುದೇ ರೀತಿಯ ಸಮಸ್ಯೆಯಾಗದಂತೆ ಪ್ರಯಾಣಿಕರು ಇಲ್ಲಿಗೆ ತಲುಪುತ್ತಿದ್ದರು ಮತ್ತು ಬೆಂಗಳೂರಿಗೆ ಬಂದವರು ಆತಂಕವಿಲ್ಲದೆ ತಮ್ಮ ಸ್ಥಳಗಳಿಗೆ ಕ್ಯಾಬ್‍ಗಳಲ್ಲಿ ತೆರಳುತ್ತಿದ್ದರು.   ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮೈಸೂರು, ತುಮಕೂರು ಸೇರಿದಂತೆ ಎಲ್ಲೆಡೆ ಎಪಿಎಂಸಿ ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳು ತೆರೆದು ಎಂದಿನಂತೆ ವ್ಯಾಪಾರ ವಹಿವಾಟುಗಳು ಕೂಡ ನಡೆಸಿವೆ. ದೂರದೂರುಗಳ ಪ್ರಯಾಣ ಕೂಡ ಯಾವುದೇ ತೊಂದರೆಯಾಗಿಲ್ಲ.

ಯಾವುದೇ ಆತಂಕವಿಲ್ಲದೆ ಬೆಳಗ್ಗೆ ಎಂದಿನಂತೆ ಪೋಷಕರು ಶಾಲೆಗಳಿಗೆ ತಮ್ಮ ಮಕ್ಕಳನ್ನು ಬಿಡುತ್ತಿದುದು ಮತ್ತು ವಿದ್ಯಾರ್ಥಿಗಳು ಕಾಲೇಜುಗಳತ್ತ ಧಾವಿಸುತ್ತಿದ್ದುದು ಕಂಡುಬಂತು.
ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ಅಂಚೆ ಕಚೇರಿಗಳು ಸೇರಿದಂತೆ ಎಲ್ಲ ಸೇವಾ ಕೇಂದ್ರಗಳು ಯಥಾಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಿವೆ. ನ್ಯಾಯಾಲಯಗಳಲ್ಲೂ ಕೂಡ ಯಾವುದೇ ಸಮಸ್ಯೆಯಾಗಿಲ್ಲ.  ಅತ್ತ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರೆ ಇತ್ತ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.

ಬೆಂಗಳೂರಿನ ಟೌನ್‍ಹಾಲ್ ಮುಂಭಾಗ ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು, ಪಾಲಿಕೆ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.  ಕಪ್ಪುಹಣ ಮುಕ್ತ, ಭ್ರಷ್ಟಾಚಾರದ ಹೆಸರಿನಲ್ಲಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಪ್ರಧಾನಿ ಮೋದಿಯವರು 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಚಿಲ್ಲರೆ ಸಮಸ್ಯೆ ಮಧ್ಯಮ ಹಾಗೂ ಬಡವರನ್ನು ಬಹುವಾಗಿ ಕಾಡುತ್ತಿದೆ. ಜನಸಾಮಾನ್ಯರ ಬವಣೆಯನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.

ಮೈಸೂರಿನಲ್ಲಿ ಬಿಜೆಪಿಯ ಕಾರ್ಪೊರೇಟರ್ ಗಳು ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದರು. ನಗರದ ನಂಜುಮಳಿಗೆಯಲ್ಲಿ ವ್ಯಾಪಾರಿಗಳಿಗೆ ಹೂವಿನ ಹಾರ ಹಾಕಿ ಸಿಹಿ ಹಂಚಿ ಆಕ್ರೋಶ್ ದಿವಸ್‍ಗೆ ವಿರೋಧಿಸಿದಕ್ಕೆ ಅಭಿನಂದನೆ ಸಲ್ಲಿಸಿ ಸಂಭ್ರಮಾಚರಣೆ ನಡೆಸಿದರು.  ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳು ಸಹಜ ಸ್ಥಿತಿಯಲ್ಲಿ ಪ್ರಮುಖ ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರ ಎಂದಿನಂತೆ ನಡೆದವು.  ಮಂಡ್ಯದ ಹೊಸಹಳ್ಳಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿ ಜೈಕಾರ ಕೂಗಿದರು.
ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಚಿಕ್ಕಮಗಳೂರಿನಲ್ಲಿ ಯಾವುದೇ ಬದಲಾವಣೆ ಕಂಡುಬರದೆ ಆಕ್ರೋಶ್ ದಿವಸ್‍ಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲಾಕಾಲೇಜುಗಳಿಗೆ ಯಾವುದೇ ರಜೆ ಇರಲಿಲ್ಲ. ವ್ಯಾಪಾರ ವಹಿವಾಟುಗಳು ಜೋರಾಗಿಯೇ ನಡೆಯಿತು. ಮಧ್ಯಾಹ್ನದ ನಂತರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ನರೇಂದ್ರ ಮೋದಿಯವರ ಕ್ರಮವನ್ನು ಬೆಂಬಲಿಸಿ ಬೆಳಗಾವಿಯಲ್ಲಿ ಕೆಲ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಬೆಂಬಲಿಸಿ ಗ್ರಾಹಕರು ಖರೀದಿಸುವ ಉತ್ಪನ್ನಗಳಿಗೆ ರಿಯಾಯ್ತಿ ನೀಡುವುದರ ಜೊತೆಗೆ ಸಿಹಿ ವಿತರಿಸುತ್ತಿರುವುದು ವಿಶೇಷವಾಗಿತ್ತು.
ಸೂಕ್ಷ್ಮ ಪ್ರದೇಶಗಳಲ್ಲಿ ಪೆÇಲೀಸ್ ಭದ್ರತೆಯನ್ನೂ ಮಾಡಲಾಗಿತ್ತು. ಕೆಎಸ್‍ಆರ್‍ಪಿ ಸೇರಿದಂತೆ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin