ಜೈಲಿನಿಂದ ಪರಾರಿಯಾಗಿದ್ದ ಕೆಎಲ್‍ಎಫ್ ಭಯೋತ್ಪಾದಕ ಮಿಂಟೂ ದೆಹಲಿಯಲ್ಲಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Minto-01

ನವದೆಹಲಿ, ನ.28-ಪಂಜಾಬ್‍ನ ನಭಾ ಜೈಲಿನಿಂದ ನಿನ್ನೆ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ ಆರು ಮಂದಿ ಉಗ್ರರ ಪೈಕಿ ಪಾಕಿಸ್ತಾನದ ಖಲಿಸ್ತಾನ ಲಿಬರೇಷನ್ ಫ್ರಂಟ್ (ಕೆಎಲ್‍ಎಫ್)ನ ಕುಖ್ಯಾತ ಕಟ್ಟಾ ಭಯೋತ್ಪಾದಕ ಹರ್ಮಿಂದರ್ ಮಿಂಟೂನನ್ನು ಪೊಲೀಸರು ಇಂದು ದೆಹಲಿ ರೈಲು ನಿಲ್ದಾಣದ ಬಳಿ ಬಂಧಿಸಿದ್ದಾರೆ. ಪಂಜಾಬ್ ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 24 ತಾಸುಗಳ ಒಳಗೆ ಮಿಂಟೂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿರುವ ಇತರ ಐವರು ಕೈದಿಗಳು ಮತ್ತು ಜೈಲ್ ಬ್ರೇಕ್‍ಗೆ ವ್ಯವಸ್ಥಿತ ಸಂಚು ರೂಪಿಸಿದ್ದ ಶಸ್ತ್ರಸಜ್ಜಿತರಿಗಾಗಿ ವಿಶೇಷ ಪೊಲೀಸ್ ತಂಡಗಳು ವ್ಯಾಪಕ ಬಲೆ ಬೀಸಿವೆ.

ನಭಾ ಕಾರಾಗೃಹಕ್ಕೆ ನಿನ್ನೆ ಬೆಳಿಗ್ಗೆ ಪೊಲೀಸ್ ಸಮವಸ್ತ್ರ ಧರಿಸಿ ಬಂದ ಐವರು ಶಸ್ತಧಾರಿ ಆಗಂತುಕರು ಗುಂಡಿನ ದಾಳಿ ನಡೆಸಿ ಕೆಎಲ್‍ಎಫ್ ಮುಖ್ಯಸ್ಥ ಮಿಂಟೂ ಮತ್ತು ಇತರ ಐವರು ಕುಪ್ರಸಿದ್ಧ ಕೈದಿಗಳೊಂದಿಗೆ ಪರಾರಿಯಾಗಿದ್ದರು.  ಮಿಂಟೂ ಜೊತೆ ಕುಖ್ಯಾತ ರೌಡಿಗಳಾಗಿದ್ದ ಗುರುಪ್ರೀತ್ ಸಿಂಗ್, ವಿಕ್ಕಿ ಗೋಂಡಾರ್, ನಿತಿನ್ ಡಿಯೋಲ್ ಹಾಗೂ ವಿಕ್ರಂ ಜೀತ್ ಎಂಬುವರೂ ಸಹ ಜೈಲಿನಿಂದ ಕಾಲ್ಕಿತ್ತಿದ್ದರು. ಸಿನಿಮಿಯ ರೀತಿಯಲ್ಲಿ ನಡೆದ ಈ ಜೈಲ್ ಬ್ರೇಕ್ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಮಧ್ಯೆ ನಭಾ ಕಾರಾಗೃಹದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin