ನೋಟ್ ಬ್ಯಾನ್ ಮಾಡಿ ಕಾಳಧನಿಕರನ್ನು ಮಟ್ಟಹಾಕಲು ಮುಂದಾದ ಮೋದಿಗೆ ಮೆಹಬೂಬ್ ಮುಫ್ತಿ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

Mufti

ನವದೆಹಲಿ,ನ.28– ಅಧಿಕ ಮೌಲ್ಯದ ನೋಟುಗಳನ್ನು ರದ್ದು ಮಾಡಿ ಕಾಳಧನಿಕರನ್ನು ಮಟ್ಟಹಾಕಲು ಮುಂದಾಗಿರುವ ಪ್ರಧಾನಿ ಮೋದಿಯವರ ನಿಲುವನ್ನು ಬೆಂಬಲಿಸಿರುವ ಜಮ್ಮುಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಅವರು ಇಂದು ದೆಹಲಿಗೆ ತೆರಳಿ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ.  ದೆಹಲಿಯಲ್ಲಿರುವ ಪ್ರಧಾನಿ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿರುವ ಅವರು, ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕಪ್ಪು ಕುಳಗಳನ್ನು ಮಟ್ಟ ಹಾಕಲು ನರೇಂದ್ರ ಮೋದಿಯವರು ತೆಗೆದುಕೊಂಡಿರುವ ಕ್ರಮ ಉತ್ತಮ ಕಾರ್ಯವಾಗಿದೆ. ದೇಶದಿಂದ ಭ್ರಷ್ಟಾಚಾರವನ್ನು ಕಿತ್ತೊಗೆಯ್ಯಲು ಮೋದಿ ಅವರ ದಿಟ್ಟ ನಿರ್ಧಾರ ಸ್ವಾಗರ್ತಾರ್ಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin