ಬೈಕ್‍ಗೆ ಕಾರು ಡಿಕ್ಕಿ : ನಾಲ್ವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

accidentಮಾಗಡಿ, ನ.28- ತಾಲ್ಲೂಕಿನ ಹೊನ್ನಾಪುರದ ಕೆರೆ ಏರಿಯ ಮೇಲೆ ಕಾರೊಂದು ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಗಾಯಾಳುಗಳನ್ನು ತಾವರೆಕೆರೆ ಸಮೀಪದ ಬೈಚಕುಪ್ಪೆ ನಿವಾಸಿ ರಮೇಶ್, ಅವರ ಮಕ್ಕಳಾದ ಚಂದ್ರಶೇಖರ್‍ಮೂರ್ತಿ, ಪದ್ಮರಾಜ್ ಎಂದು ಗುರುತಿಸಲಾಗಿದೆ.ಮಕ್ಕಳ ತಲೆಗೆ ಗಂಭೀರ ಗಾಯಗಳಾಗಿದ್ದು, ರಮೇಶ್ ಪತಿ ಯಲ್ಲಮ್ಮ ಅವರ ಮುಖಕ್ಕೆ ಗಾಯವಾಗಿದೆ. ಸ್ಕೂಟರ್‍ನಲ್ಲಿ ರಾಮನಗರದ ಬಂಧುಗಳ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಗಾಯಾಳುಗಳಿಗೆ ಮಾಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್‍ಗೆ ಸೇರಿಸಲಾಗಿದೆ.
ಈ ಬಗ್ಗೆ ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin