ಇಬ್ಬರು ಮೊಬೈಲ್ ಕಳ್ಳರ ಅರೆಸ್ಟ್ : 40 ಲಕ್ಷ ರೂ. ಬೆಲೆಯ 402 ಮೊಬೈಲ್‍ಗಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

Crime-BNG

ಬೆಂಗಳೂರು, ನ.29- ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಮೊಬೈಲ್ ಕಳ್ಳರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ 40 ಲಕ್ಷ ರೂ. ಬೆಲೆಯ ವಿವಿಧ ಕಂಪೆನಿಗಳ 402 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ಸುಬೇದ್ ಮತ್ತು ಬೆಂಗಳೂರಿನ ಜೆಜೆ ನಗರದ ಆರಿಫ್ ಪಾಷ ಬಂಧಿತ ಮೊಬೈಲ್ ಕಳ್ಳರಾಗಿದ್ದು, ಇವರಿಂದ 40 ಲಕ್ಷ ರೂ. ಬೆಲೆಬಾಳುವ 53 ಐ- ಫೋನ್, 87 ಸ್ಯಾಮ್‍ಸಂಗ್, 35 ಸೋನಿ, 50 ಮೈಕ್ರೋಮ್ಯಾಕ್ಸ್, 20 ಎಸ್‍ಟಿಸಿ, 16 ಲೇನೋವೊ, 10 ಮೊಟೊರೋಲಾ, 10 ಕಾರ್ಬನ್, 17 ನೋಕಿಯೋ, 8 ಎಲ್‍ಜಿ ಹಾಗೂ ಇತರೆ 170 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಕಳ್ಳತನ ಮಾಡಿದ ಮೊಬೈಲ್‍ಗಳನ್ನು ಪತ್ತೆ ಮಾಡಬಾರದೆಂಬ ಉದ್ದೇಶದಿಂದ ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.  ಈ ಆರೋಪಿಗಳು ನಗರ ಸಾರಿಗೆ ಬಸ್‍ಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಜೇಬಿನಿಂದ ಮೊಬೈಲ್‍ಗಳನ್ನು ಕಳೆದ ಒಂದು ವರ್ಷದಿಂದ ಕಳ್ಳತನ ಮಾಡುತ್ತಿದ್ದರಲ್ಲದೆ ಸಿಮ್‍ಗಳನ್ನು ತೆಗೆದು ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆಯಿಂದ ತಿಳಿದುಬಂದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin