ಕರಡಿದೊಡ್ಡಿ ಗ್ರಾಮದ ಶಿವಲಿಂಗಯ್ಯನವರ ತೋಟದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

chiratre

ರಾಮನಗರ, ನ.29-ತಾಲೂಕಿನ ಕರಡಿದೊಡ್ಡಿ ಗ್ರಾಮದ ಶಿವಲಿಂಗಯ್ಯನವರ ತೋಟದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದ ಒಂದೂವರೆ ತಿಂಗಳಿಂದ ಗ್ರಾಮದವರ ನಿದ್ದೆಗೆಡಿಸಿದ್ದ ಈ ಚಿರತೆ ನಿನ್ನೆ ಬೋನಿನಲ್ಲಿ ಸೆರೆಯಾಗಿದೆ.ಚಿರತೆ ಹಾವಳಿ ಹೆಚ್ಚಾದ ಕಾರಣ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಒತ್ತಾಯ ತಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಶಿವಲಿಂಗಯ್ಯನವರ ತೋಟದಲ್ಲಿ ಬೋನು ಇರಿಸಿದ್ದರು. ಈ ಬೋನಿನಲ್ಲಿ ಚಿರತೆ ಬಂಧಿಯಾಗಿದೆ. ಕಳೆದ ಎರಡು ತಿಂಗಳ ಹಿಂದೆಯೂ ಕೂಡ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿತ್ತು. ಸೆರೆಸಿಕ್ಕ ಎರಡನೆ ಚಿರತೆ ಇದಾಗಿದೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin