ಗ್ರಾಮದ ಶಾಂತಿ ಕದಡುವವರಿಗೆ ಕಾನೂನು ರೀತಿ ಕ್ರಮ : ವೃತ್ತ ನಿರೀಕ್ಷಕರು ಬಾಳೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

balegowda

ಕುಣಿಗಲ್, ನ.29-ಜಾತಿ-ಜಾತಿಗಳ ನಡುವೆ ಕಲಹ ಸೃಷ್ಟಿಸಿ ಗ್ರಾಮಗಳಲ್ಲಿ ಅಶಾಂತಿ ಉಂಟು ಮಾಡುವ ದುಷ್ಟರಿಗೆ ಗ್ರಾಮದ ಮುಖಂಡರು ಬುದ್ಧಿ ಹೇಳದಿದ್ದಲ್ಲಿ ಕಾನೂನು ರೀತಿ ಬುದ್ಧಿ ಕಲಿಸಬೇಕಾಗುತ್ತದೆ ಎಂದು ವೃತ್ತ ನಿರೀಕ್ಷಕ ಬಾಳೇಗೌಡ ಎಚ್ಚರಿಕೆ ನೀಡಿದರು.ಪಟ್ಟಣದ ಕಂದಾಯ ಭವನದಲ್ಲಿ ಆಯೋಜಿಸಲಾಗಿದ್ದ ಹುತ್ರಿದುರ್ಗ ಹೋಬಳಿ ಯಲಗಲವಾಡಿ ಗ್ರಾಮದ ಸವರ್ಣೀಯರು ಮತ್ತು ದಲಿತರ ನಡುವೆ ಸಾಮರಸ್ಯ ಕಲ್ಪಿಸಲು ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಲು ಕೆಲವು ಯುವಕರು ಹಬ್ಬಹರಿದಿನಗಳಲ್ಲಿ ಗ್ರಾಮಕ್ಕೆ ಬಂದು ಮದ್ಯ ಕುಡಿಸಿ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಅಶಾಮತಿ ಉಂಟು ಮಾಡಲು ಕಾರಣವಾಗುತ್ತಿದ್ದಾರೆ.

ಇಂತಹವರಿಗೆ ಗ್ರಾಮಸ್ಥರು ಸೊಪ್ಪು ಹಾಕಬೇಡಿ. ಸಾಧ್ಯವಾದರೆ ಊರಿನ ಹಿರಿಯ ಮುಖಂಡರು ಅಂತಹ ಕಿಡಿಗೇಡಿಗಳಿಗೆ ಬುದ್ಧಿ ಹೇಳಿ. ಇಲ್ಲದಿದ್ದಲ್ಲಿ ನಮಗೆ ದೂರು ನೀಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಬುದ್ಧಿ ಕಲಿಸುತ್ತೇವೆ. ಇನ್ನು ಮುಂದೆ ಯಲಗಲವಾಡಿ ಗ್ರಾಮದಲ್ಲಿ ಜಾತಿ ತಾರತಮ್ಯವಿಲ್ಲದೆ ಎಲ್ಲಾ ಸಮುದಾಯದವರಿಗೂ ಕುಡಿಯುವ ನೀರು ಕಲ್ಪಿಸಬೇಕು ಎಂದು ಗ್ರಾ.ಪಂ.ಪಿಡಿಒಗೆ ಸೂಚಿಸಿದರು.ಹೊಲ, ತೋಟದ ಕೆಲಸ ಕಾರ್ಯಗಳಿಗೆ ದಲಿತರನ್ನು ಕರೆಯಬೇಕೆಂದು ಸವರ್ಣೀಯರಿಗೆ ಸೂಚಿಸಿದರು.ಸಭೆಯಲ್ಲಿ ತಹಶೀಲ್ದಾರ್ ಕೆ.ರಮೇಶ್, ತಾ.ಪಂ. ಇಒ ವಿಜಯಗೌಡ, ಪಿಎಸ್‍ಐ ಕೇಶವಮೂರ್ತಿ, ದಲಿತ ಮುಖಂಡರಾದ ವಿ.ಶಿವಶಂಕರ್, ಬೀಡಿ ಕುಮಾರ್, ವರದರಾಜ್ ಮತ್ತಿತರರು ಹಾಜರಿದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin