ನಾಪತ್ತೆಯಾಗಿರುವ ಜೆಎನ್‍ಯು ವಿದ್ಯಾರ್ಥಿ ಪತ್ತೆಗೆ 10 ಲಕ್ಷ ರೂ. ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

NJU-Najeeb-ahmmad

ನವದೆಹಲಿ, ನ.29-ನಾಪತ್ತೆಯಾಗಿರುವ ಜವಹರ್‍ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹಮದ್ ಪತ್ತೆಗೆ ನೆರವಾಗುವ ಮಾಹಿತಿ ನೀಡುವವರ ಬಹುಮಾನ ಮೊತ್ತವನ್ನು ದೆಹಲಿ ಪೊಲೀಸರು 10 ಲಕ್ಷ ರೂ.ಗಳಿಗೆ ಏರಿಸಿದ್ದಾರೆ. ಒಂದು ತಿಂಗಳಿಗಿಂತ ಹೆಚ್ಚು ಸಮಯದಿಂದ ನಿಗೂಢವಾಗಿ ಕಣ್ಮರೆಯಾಗಿರುವ ನಜೀಬ್‍ನನ್ನು ಪತ್ತೆ ಮಾಡಲು ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ ನೀಡುವ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮ ಒಪ್ಪಿಗೆ ನೀಡಿದ್ದಾರೆ. ನಜೀಬ್ ಪತ್ತೆಗೆ ಈ ಮೊದಲು 50,000 ರೂ.ಗಳ ಇನಾಮು ಘೋಷಿಸಲಾಗಿತ್ತು. ನಂತರ ಅದನ್ನು 1 ಲಕ್ಷ ರೂ.ಗಳಿಗೆ, ತರವಾಯ 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈಗ ಬಹುಮಾನದ ಮೊತ್ತ 10 ಲಕ್ಷ ರೂ.ಗಳಿಗೆ ಏರಿದೆ. ಜೆಎನ್‍ಯು ಸಂಶೋಧನಾ ವಿದ್ಯಾರ್ಥಿ ನಜೀಬ್ ನಾಪತ್ತೆ ಪ್ರಕರಣ ನಿಗೂಢವಾಗಿದ್ದು, ಪೊಲೀಸ್ ಇಲಾಖೆಗೆ ತಲೆನೋವು ತಂದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin