ನಾಯಿ ದಾಳಿ : ಬಾಲಕ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

dog

ಪಿರಿಯಾಪಟ್ಟಣ, ನ.29- ಮನೆ ಮುಂಭಾಗ ಆಟವಾಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿನಾಯಿ ದಾಳಿ ನಡೆಸಿದ ಪರಿಣಾಮ ಬಾಲಕ ತೀರ್ವವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಕುಂಬಾರ ಬೀದಿಯಲ್ಲಿ ಜರುಗಿದೆ.ಕುಂಬಾರ ಬೀದಿಯ ಆಟೋ ಚಾಲಕ ಫಯಾಜ್ ಅವರ ಪುತ್ರ ಫರ್‍ಖಾನ್‍ಬೇಗ್ ನಾಯಿ ದಾಳಿಯಿಂದಾಗಿ ತೀರ್ವಸ್ವರೂಪದ ಗಾಯಗಳಿಗೆ ತುತ್ತಾದ ಬಾಲಕನಾಗಿದ್ದು , ಆತನ ತಾಯಿ ವಾಹಿದಾ ಬಾನು ಅವರ ಕಾಲಿಗೂ ಸಹಾ ನಾಯಿ ಕಡಿದಿದ್ದು ಗಾಯಗೊಂಡಿದ್ದಾರೆ.ಎಂದಿನಂತೆ ಮನೆ ಮುಂಭಾಗ ಆಟವಾಡುತ್ತಿದ್ದ ಬಾಲಕನ ಮೇಲೆ ನಾಯಿ ದಾಳಿ ಮಾಡಿದ್ದು ಅದನ್ನು ಬಿಡಿಸಲು ಬಂದ ತಾಯಿಗೂ ನಾಯಿ ಕಡಿದಿದ್ದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.
ದಾಳಿ ಮಾಡಿದ ನಾಯಿಯನ್ನು ಹುಚ್ಚುನಾಯಿ ಎಂದು ಸ್ಥಳೀಯರು ಹೇಳುತ್ತಿದ್ದು ನಾಯಿಯನ್ನು ಹಿಡಿಯುವ ಸಂಬಂಧ ಪುರಸಭೆಯವರು ಮುಂದಾಗುವಂತೆ ಮನವಿ ಮಾಡಿದ್ದಾರೆ.ಪಟ್ಟಣದಲ್ಲಿ ಹೆಚ್ಚುತ್ತಿರುವ ನಾಯಿಗಳ ಉಪಟಳ: ಇದು ಮೊದಲನೆ ಪ್ರಕರಣವೇನೂ ಅಲ್ಲ . ಈ ಹಿಂದೆಯೂ ಸಹಾ ಟ್ಯಾಂಕ್ ಬಡಾವಣೆ ಹಾಗೂ ತಾಲೂಕು ಕಚೇರಿ ವ್ಯಾಪ್ತಿಯಲ್ಲಿ ನಾಯಿಗಳ ಕಡಿತಕ್ಕೆ ಹಲವಾರು ಮಂದಿ ಒಳಗಾಗಿದ್ದು ನಾಯಿಗಳ ಕಾಟ ಪಟ್ಟಣದಲ್ಲಿ ಹೆಚ್ಚುತ್ತಿದ್ದು ಹೆಚ್ಚಿನ ಅನಾಹುತಗಳು ಆಗುವ ಮುನ್ನವೇ ಸಂಬಂಧಪಟ್ಟವರು ನಾಯಿಗಳನ್ನು ಹಿಡಿಸುವ ಕ್ರಮಕ್ಕೆ ಮುಂದಾಗುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin