ಮಟ್ಕಾ ದಂಧೆಕೋರ ಗಡಿಪಾರು : ಜಿಲ್ಲಾಧಿಕಾರಿ ಸತ್ಯವತಿ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ನ.29- ಮಟ್ಕಾ, ಜೂಜಾಟದಲ್ಲಿ ತೊಡಗಿದ್ದ ಬಾಳೆಹೊನ್ನೂರು ಸಮೀಪದ ಕಡಬಗೆರೆ ನಿವಾಸಿ ಕೆ.ರಾಜು (39) ಎಂಬುವನನ್ನು ಎರಡು ವರ್ಷಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾಧಿಕಾರಿ ಸತ್ಯವತಿ ಆದೇಶ ಹೊರಡಿಸಿದ್ದಾರೆ. ಕಡಬಗೆರೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ರಾಜು ಬಾಳೆಹೊನ್ನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಟ್ಕಾ, ಜೂಜಾಟ ನಡೆಸುತ್ತಿದ್ದ. 2014ರಲ್ಲಿ ಈತನ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಇಲ್ಲಿನ ಸ್ಥಳೀಯ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದಾಗ ತಪ್ಪೋಪ್ಪಿಕೊಂಡು ದಂಡ ಕಟ್ಟಿ ಹೊರಬಂದಿದ್ದ. ನಂತರವೂ ತನ್ನ ಚಾಳಿ ಮುಂದುವರಿಸಿದ ರಾಜು ಬಾಳೆಹೊನ್ನೂರು ಪೊಲೀಸರಿಗೆ ತಲೆನೋವಾಗಿದ್ದ.ಪೊಲೀಸ್ ವರಿಷ್ಠಾಧಿಕಾರಿಗಳು ಇವನ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು, ಎಸ್‍ಪಿಯವರ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಆರೋಪಿಯನ್ನು ಎರಡು ವರ್ಷಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin