ಯಾವುದೇ ಚರ್ಚೆಯಿಲ್ಲದೆ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Session-01

ನವದೆಹಲಿ. ನ.29 : ನೋಟ್ ಬ್ಯಾನ್ ಮಾಡಿ ಜನಮನ್ನಣೆ ಗಳಿಸಿಕೊಡದಿರುವ ಕೇಂದ್ರ ಸರ್ಕಾರ ಕಪ್ಪುಹಣ ಹೊಂದಿರುವವರು ಭಾರಿ ತೆರಿಗೆ ಮತ್ತು ದಂಡ ಪಾವತಿಸುವ ಮೂಲಕ ಅದನ್ನು ಸಕ್ರಮಗೊಳಿಸಲು ಸಾಧ್ಯವಾಗುವಂತೆ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆಯಲ್ಲಿ ವಿಪಕ್ಷಗಳು ಗದ್ದಲದ ನಡುವೆಯೇ ಮಸೂದೆ ಅಂಗೀಕಾರ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಯಾವುದೇ ರೀತಿಯ ಚರ್ಚೆ ನಡೆಸದೆ ಹಣಕಾಸು ಮಸೂದೆಯೊಂದಕ್ಕೆ ಅಂಗೀಕಾರ ಲಭಿಸಿದೆ. ದನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿ ಘೋಷಣೆ ಮಾಡಿದ ಮೂರು ವಾರಗಳ ನಂತರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಿದ್ದುಪಡಿ ಮಸೂದೆಯನ್ನು ನಿನ್ನೆ ಲೋಕಸಭೆಯಲ್ಲಿ ಮಂಡಿಸಿದ್ದರು.

ನೋಟು ರದ್ದತಿಯ ನಂತರ ಬ್ಯಾಂಕುಗಳಲ್ಲಿ ಜಮೆ ಮಾಡಲಾದ ದಾಖಲೆರಹಿತ ಕಪ್ಪುಹಣಕ್ಕೆ ದಂಡ ಮತ್ತು ಮೇಲ್ತೆರಿಗೆ ಸೇರಿ ಶೇ 50ರಷ್ಟು ತೆರಿಗೆ ವಿಧಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ. ದಾಖಲೆರಹಿತ ಹಣವನ್ನು ಘೋಷಣೆ ಮಾಡದೆ ನಂತರ ಸಿಕ್ಕಿಬಿದ್ದರೆ ಅವರಿಂದ ಗರಿಷ್ಠ ಶೇ 85ರಷ್ಟು ತೆರಿಗೆ ವಸೂಲು ಮಾಡಲು ಯೋಜಿಸಲಾಗಿದೆ.

ತಮ್ಮಲ್ಲಿರುವ ಕಪ್ಪುಹಣವನ್ನು ಬದಲಾಯಿಸುವುದಕ್ಕೆ ಜನರು ಕಾನೂನುಬಾಹಿರ ದಾರಿ ಹುಡುಕಿಕೊಳ್ಳುವುದನ್ನು ತಪ್ಪಿಸಲು ಸರ್ಕಾರವೇ ಕಾನೂನುಬದ್ಧ ಅವಕಾಶ ನೀಡಬೇಕು ಎಂದು ಪರಿಣತರು ಸಲಹೆ ನೀಡಿದ್ದಾರೆ. ಇಂತಹ ಹಣಕ್ಕೆ ಭಾರಿ ತೆರಿಗೆ ಮತ್ತು ದಂಡ ವಿಧಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರ ಆಧಾರದಲ್ಲಿ ಈ ಮಸೂದೆ ಸಿದ್ಧಪಡಿಸಲಾಗಿದೆ ಎಂದು ಲೋಕಸಭೆಯಲ್ಲಿ ಜೇಟ್ಲಿ ಹೇಳಿದ್ದಾರೆ. ಇದರಿಂದಾಗಿ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ಹಾಕಿಕೊಳ್ಳಲು ಸರ್ಕಾರಕ್ಕೆ ಹೆಚ್ಚುವರಿ ಹಣ ದೊರೆಯುತ್ತದೆ ಎಂದೂ ಅವರು ತಿಳಿಸಿದ್ದಾರೆ. ಈ ಮಸೂದೆಯನ್ನು ಲೋಕಸಭೆಯಲ್ಲಿ ಹಣಕಾಸು ಮಸೂದೆಯಾಗಿ ಮಂಡನೆ ಮಾಡಿರುವುದರಿಂದ ರಾಜ್ಯಸಭೆಯ ಅಂಗೀಕಾರ ಅಗತ್ಯವಿಲ್ಲ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin