ಲಕ್ಷಾಂತರ ಮೌಲ್ಯದ ಜೋಡಿ ಹಸು ಕಳುವು

ಈ ಸುದ್ದಿಯನ್ನು ಶೇರ್ ಮಾಡಿ

thifte

ಪಾಂಡವಪುರ, ನ.29-ಬಡ ರೈತನೊಬ್ಬನ ಜೀವನಾಧಾರವಾಗಿದ್ದ ಒಂದು ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ಜೋಡಿ ಹಸುಗಳನ್ನು ದುಷ್ಕರ್ಮಿಗಳು ಕಳುವು ಮಾಡಿರುವ ಘಟನೆ ತಾಲ್ಲೂಕಿನ ಕೆನ್ನಾಳು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪಿಎಸ್‍ಎಸ್‍ಕೆ ಪ್ರೌಢಶಾಲೆ ಹಿಂಭಾಗದಲ್ಲಿರುವ ಮರೀಗೌಡರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳು ಕಳುವಾಗಿವೆ. ಈ ಬಗ್ಗೆ ಮರೀಗೌಡ ಅವರು ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಕಳುವಾಗಿರುವ ಎರಡು ಹಸುಗಳ ಪೈಕಿ ಒಂದು ಎಚ್.ಎಫ್. ಮತ್ತು ಇನ್ನೊಂದು ಜರ್ಸಿ ಹಸುವಾಗಿತ್ತು. ಇವು ಪ್ರತಿನಿತ್ಯ 20 ಲೀಟರ್ ಹಾಲು ನೀಡುತ್ತಿದ್ದವು, ಇದೇ ನಮ್ಮ ಜೀವನಾಧಾರವಾಗಿತ್ತು. ಹಸು ಕಳುವಾಗಿರುವುದರಿಂದ ನಮ್ಮ ಜೀವನ ಕಷ್ಟವಾಗಿದ್ದು, ಪೊಲೀಸರು ಕೂಡಲೇ ಕಳುವಾಗಿರುವ ನಮ್ಮ ಹಸುಗಳನ್ನು ಹುಡುಕಿಕೊಡಬೇಕು ಎಂದು ಅವರು ಕೋರಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin