ಡಾಮ್ನಿಕ್’ನನ್ನ ತಮಿಳುನಾಡಿಗೆ ಕರೆದೊಯ್ದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Domnik-Bank-Roberry-ATM

ಬೆಂಗಳೂರು, ನ.30– ನೋಟು ನಿಷೇಧ ಸಂದರ್ಭದಲ್ಲೇ 1.37 ಕೋಟಿ ರೂ. ಹಣದೊಂದಿಗೆ ನಾಪತ್ತೆಯಾಗಿ ಇದೀಗ ಸೆರೆ ಸಿಕ್ಕ ಆರೋಪಿ ಡಾಮಿನಿಕ್ನನ್ನು ಹೆಚ್ಚಿನ ವಿಚಾರಣೆಗಾಗಿ ಉಪ್ಪಾರಪೇಟೆ ಪೊಲೀಸರು ಚೆನ್ನೈಗೆ ಕರೆದೊಯ್ದಿದ್ದಾರೆ. ಹಣ ದರೋಡೆ ಮಾಡಿದ ನಂತರ ಬಸ್ ಹಾಗೂ ರೈಲಿನಲ್ಲೇ ಸೇಲಂ, ಚೆನ್ನೈ ಸೇರಿದಂತೆ ವಿವಿಧೆಡೆ ಸಂಚರಿಸಿ ಸೋಮವಾರ ರಾತ್ರಿ ಕೆ.ಆರ್.ಪುರ ರೈಲ್ವೆ ನಿಲ್ದಾಣ ಸಮೀಪ ಟಿನ್ ಫ್ಯಾಕ್ಟರಿ ಬಳಿ ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದಾಗ ಮಫ್ತಿಯಲ್ಲಿದ್ದ ಪೊಲೀಸರು ಆರೋಪಿಯನ್ನು ಗುರುತಿಸಿ ಸೆರೆ ಹಿಡಿದು ತೀವ್ರ ವಿಚಾರಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾಲಯವು 5 ದಿನಗಳವರೆಗೆ ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಪೊಲೀಸರು ಆರೋಪಿಯಿಂದ ಹಲವು ಮಾಹಿತಿ ಕಲೆ ಹಾಕಿದ್ದು, ದರೋಡೆ ಮಾಡಿ ಪರಾರಿಯಾಗಿದ್ದ ಸ್ಥಳಗಳಿಗೆ ಆರೋಪಿಯನ್ನು ಕರೆದೊಯ್ದಿದ್ದಾರೆ. ಚೆನ್ನೈ ಮತ್ತು ಸೇಲಂನಲ್ಲಿ ಸಂಬಂಧಿಕರಿಂದ ಪಡೆದಿದ್ದ 10 ಲಕ್ಷ ಸಾಲವನ್ನು ತೀರಿಸಿ ಉಳಿದ 2 ಲಕ್ಷ ಖರ್ಚು ಮಾಡಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಸಂಬಂಧಿಕರಿಗೆ ನೀಡಿದ್ದ ಹಣ ವಸೂಲಿಗಾಗಿ ಹಾಗೂ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಚೆನ್ನೈಗೆ ಕರೆದೊಯ್ದಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin