ಚಿನ್ನದ ಮೇಲೂ ಬಿತ್ತು ಕೇಂದ್ರ ಸರ್ಕಾರದ ಕಣ್ಣು…!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ 1 : 500 / 1000 ಮುಖಬೆಲೆಯ ನೋಟ್ ಬ್ಯಾನ್ ಮಾಡಿ ಕಪ್ಪು ಹಣಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದ ಕೇಂದ್ರ ಸರ್ಕಾರದ ಕಣ್ಣು ಈಗ ಚಿನ್ನದ ಮೇಲೆ ನೆಟ್ಟಿದೆ. ನಾನಾ ರೂಪದಲ್ಲಿರುವ  ಕಪ್ಪು ಹಣವನ್ನು ಹೊರ ತೆಗೆಯಲು ಹಾರ ಸಾಹಸ ಪಡುತ್ತಿರುವ ಕೇಂದ್ರ ಸರ್ಕಾರ ಈಗ ಚಿನ್ನದ ಮೇಲೆ ನಿರ್ಬಂಧ ಹೇರಲು ತೀರ್ಮಾನಿಸಿದೆ. ಮನೆಯಲ್ಲಿ ಕೆ.ಜಿಗಟ್ಟಲೆ ಇಟ್ಟುಕೊಂಡಿರುವವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.

Gold-01

ಚಿನ್ನ ಶೇಖರಣೆ ಬಗ್ಗೆ ಆದಾಯ ಮಸೂದೆಗೆ ತಿದ್ದುಪಡಿ ಮಾಡುವುದಾಗಿ ಗುರುವಾರ ಕೇಂದ್ರ ಹಣಕಾಸು ಇಲಾಖೆ ಪ್ರಕಟಿಸಿದೆ. ಕಾಳಧನಿಕರು ತಮ್ಮ ಅಕ್ರಮ ಹಣವನ್ನು ಚಿನ್ನ ಖರೀದಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ವಿವಾಹಿತ ಮಹಿಳೆಯೊಬ್ಬರು ಗರಿಷ್ಠ 500 ಗ್ರಾಂ. ಚಿನ್ನ ಇಟ್ಟುಕೊಳ್ಳಲು ಅವಕಾಶವಿದ್ದು, ಅವಿವಾಹಿತ ಮಹಿಳೆಯರು ಗರಿಷ್ಠ 250 ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು. ಮತ್ತು ಪುರುಷರು ಗರಿಷ್ಠ 100 ಗ್ರಾಂ. ನ್ನು ಇಟ್ಟುಕೊಳ್ಳಬೇಕು ಎನ್ನುವ ನಿರ್ಬಂಧ ಹೇರಲಾಗುತ್ತಿದ್ದು. ರಂಗೋಲಿ ಕೆಳಗೆ ನುಸುಳಿದ ಕಾಳಧನಿಕರಿಗೆ ಬಿಸಿಮುಟ್ಟಿಸಲು ಮೋದಿ ಸರ್ಕಾರ ಮತ್ತೊಂದು ಹೆಜ್ಜೆಯನ್ನಿಟ್ಟಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin