ಹಾವೇರಿಯಲ್ಲಿ ಸರಣಿ ಅಪಘಾತ : ಓರ್ವ ಚಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident

ಹಾವೇರಿ, ಡಿ.1 – ಒಂದರ ಹಿಂದೆ ಒಂದರಂತೆ ಮೂರು ಲಾರಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಪರಿಣಾಮ ಚಾಲಕನೊಬ್ಬ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಹುಲಿಹಳ್ಳಿ ಹೆದ್ದಾರಿಯಲ್ಲಿ ಸಂಭವಿಸಿದೆ. ಮುಂದೆ ವೇಗವಾಗಿ ಹೋಗುತ್ತಿದ್ದ ಲಾರಿಯೊಂದು ಅಚಾನಕ್ ಆಗಿ ನಿಂತ ಹಿನ್ನೆಲೆಯಲ್ಲಿ ಹಿಂದೆ ಬರುತ್ತಿದ್ದ ಎರಡು ಲಾರಿಗಳು ಅದಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಧಾವಿಸಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ಚಾಲಕನ ಹೆಸರು ಮತ್ತು ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin