ಜನರಲ್ ಜೇಮ್ಸ್ ಮ್ಯಾಟಿಸ್ ಅಮೆರಿಕ ರಕ್ಷಣಾ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

Trum--America-01

ವಾಷಿಂಗ್ಟನ್, ಡಿ.2- ನೌಕಾಪಡೆಯ ನಿವೃತ್ತ ಉನ್ನತಾಧಿಕಾರಿ ಜನರಲ್ ಜೇಮ್ಸ್ ಮ್ಯಾಟಿಸ್ ಅವರನ್ನು ದೇಶದ ರಕ್ಷಣಾ ಸಚಿವರಾಗಿ ನೇಮಕ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಹಿಒದ ಸಿನ್‍ಸಿನಾಟಿಯಲ್ಲಿ ತಮ್ಮ ಪ್ರಥಮ ಧನ್ಯವಾದ ವಿಜಯ ಪ್ರವಾಸದಲ್ಲಿ ವಿಜಯೋನ್ಮಾದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕ ರಕ್ಷಣಾ ಸಚಿವರನ್ನಾಗಿ ಮ್ಯಾಡ್‍ಡಾಗ್ ಮ್ಯಾಟಿಸ್ ಅವರನ್ನು ನೇಮಕ ಮಾಡಲಾಗುವುದು. ಇರಾಕ್ ಮತ್ತು ಆಫ್ಘಾನಿಸ್ತಾನ ಯುದ್ಧಭೂಮಿಯಲ್ಲಿ ಅವರಿಗೆ ಇರುವ ಅಗಾಧ ಅನುಭವವನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin