ದೆಹಲಿಯಲ್ಲಿ ದಟ್ಟ ಮಂಜು : 144 ವಿಮಾನಗಳ ಸಂಚಾರಕ್ಕೆ ಅಡಚಣೆ, 100 ರೈಲುಗಳು ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

Airport-01

ನವದೆಹಲಿ, ಡಿ.2-ರಾಜಧಾನಿ ಮೇಲೆ ಆವರಿಸಿರುವ ದಟ್ಟ ಮಂಜು ಮೂರನೇ ದಿನವಾದ ಇಂದು ಕೂಡ ಮುಂದುವರೆದಿದ್ದು, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದದಲ್ಲಿ 114 ವಿಮಾನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಬಿಹಾರ ಮತ್ತು ಪಂಜಾಬ್ ಮಾರ್ಗವಾಗಿ ನವದೆಹಲಿಗೆ ಆಗಮಿಸಬೇಕಿದ್ದ 100 ರೈಲುಗಳು ಸಹ ವಿಳಂಬವಾಗಿವೆ. ಇಡೀ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಐಜಿಐ) ಮಂಜಿನಿಂದ ಆವೃತವಾಗಿದ್ದು, ರನ್‍ವೇ ಕಾಣದಿರುವ ಕಾರಣದಿಂದಾಗಿ ಎಂಟು ಗಂಟೆಗಳ ಕಾಲ ವಿಮಾನಯಾನಕ್ಕೆ ಅಡ್ಡಿಯಾಯಿತು. ಆರು  ದೇಶೀಯ ವಿಮಾನಗಳ ಹಾರಾಟದ ದಿಕ್ಕನ್ನು ಇತರ ವಿಮಾನ ನಿಲ್ದಾಣಗಳಿಗೆ ಬದಲಿಸಲಾಯಿತು. ಅಲ್ಲದೇ 138 ವಿಮಾನಗಳು ಹಾರಾಟ ವಿಳಂಬವಾಯಿತು.

ರನ್‍ವೇ ಕಾಣದಿರುವ ಕಾರಣದಿಂದಾಗಿ ನಿನ್ನೆಯೂ ಕೂಡ ನಾಲ್ಕು ದೇಶೀಯ ವಿಮಾನಗಳ ಹಾರಾಟದ ದಿಕ್ಕನ್ನು ಇತರ ವಿಮಾನ ನಿಲ್ದಾಣಗಳಿಗೆ ಬದಲಿಸಲಾಗಿತ್ತು.   ಇಂದು ಮುಂಜಾನೆಯಿಂದಲೇ ವಿಮಾನನಿಲ್ದಾಣವು ಮಂಜು ಹೊದ್ದಿರುವಂತೆ ಕಂಡುಬರುತ್ತಿದೆ. ರನ್‍ವೇ ಮೇಲೆ ಮಂಜಿನ ಮುಸುಕು ಹರಡಿದೆ. ಉಷ್ಣಾಂಶದಲ್ಲಿ ಇಳಿಕೆ ಕಂಡುಬಂದಿದೆ ಎಂದು ಐಜಿಐನ ವಾಯು ಸಂಚಾರ ನಿಯಂತ್ರಣ ವಿಭಾಗದ ಅಧಿಕಾರಿ ಹೇಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin