ಕಲ್ಲು ಗಣಿ ಕ್ವಾರಿಗೆ ಬಿದ್ದ ಮಿನಿ ಟೆಂಪೋ : 7 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

kolhapur

ಕೊಲ್ಲಾಪುರ, ಡಿ.3-ಮಿನಿ ಟೆಂಪೋವೊಂದು ಕಲ್ಲುಗಣಿ ಕ್ವಾರಿಗೆ ಬಿದ್ದು ಏಳು ಕಾರ್ಮಿಕರು ಮೃತಪಟ್ಟು, ಇತರ 11 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಮಹಾರಾಷ್ಟ್ರ ಜಿಲ್ಲೆಯ ಕೊಲ್ಹಾಪುರದ ಬಸ್ತಾವಾಡೆ ಗ್ರಾಮದ ಬಳಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾಗಲ್ ಎಂಐಡಿಸಿ ಕಾರ್ಖಾನೆಯ 7 ನೌಕರರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಎರಡನೇ ಪಾಳಿ ಮುಗಿಸಿಕೊಂಡು ಖಾಸಗಿ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ನೀರು ತುಂಬಿದ್ದ ಹಳ್ಳಕ್ಕೆ ಬಿದ್ದಿತು. ಗಾಯಾಳುಗಳು ಕಾಗಲ್ ತº ಸೀಲ್‍ನ ಮುರ್‍ಗುಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin