ದೆಹಲಿಯ ಪಂಚತಾರಾ ಹೋಟೆಲ್’ವೊಂದರಲ್ಲಿ ಅಮೆರಿಕ ಮಹಿಳೆ ಮೇಲೆ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Gang-Rape

ನವದೆಹಲಿ, ಡಿ.3-ರಾಜಧಾನಿ ನವದೆಹಲಿ ದೇಶದ ಗ್ಯಾಂಗ್‍ರೇಪ್ ಕ್ಯಾಪಿಟಲ್ ಆಗುತ್ತಿದೆಯೇ? ಇತ್ತೀಚೆಗೆ ಇಲ್ಲಿ ಮರುಕಳಿಸುತ್ತಿರುವ ವಿಕೃತಕಾಮ ದೌರ್ಜನ್ಯ ಪ್ರಕರಣಗಳನ್ನು ನೋಡಿದರೆ ಇದು ನಿಜವೇನಿಸುತ್ತದೆ. ಅಮೆರಿಕದ ಮಹಿಳೆಯೊಬ್ಬಳ ಮೇಲೆ ಪ್ರವಾಸಿ ಗೈಡ್ ಸೇರಿದಂತೆ ಐವರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಕನ್ನೌಟ್ ಪ್ಲೇಸ್‍ನ ಪಂಚತಾರಾ ಹೋಟೆಲ್‍ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.   ಗ್ಯಾಂಗ್‍ರೇಪ್‍ಗೆ ಒಳಗಾದ ಮಹಿಳೆಯು ಈ-ಮೇಲ್ ಮೂಲಕ ನೀಡಿರುವ ದೂರನ್ನು ಪೊಲೀಸರು ಸ್ವೀಕರಿಸಿದ್ದಾರೆ. ಎಫ್‍ಐಆರ್ ದಾಖಲಾದ ನಂತರ ತನ್ನ ಹೇಳಿಕೆಯನ್ನು ನೀಡಲು ಆಕೆ ದೆಹಲಿಗೆ ಬರಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯನ್ನು ಪೂರ್ಣವಾಗಿ ವಿವರಿಸಿ ಆಕೆ ದೆಹಲಿ ಪೊಲೀಸ್ ಕಮಿಷನರ್ ಅವರ ಅಧಿಕೃತ ಈ-ಮೇಲ್‍ಗೆ ದೂರು ದಾಖಲಿಸಿದ್ದಾರೆ. ಕಳೆದ ಮಾರ್ಚ್ 2016ರಂದು ಕಾರ್ಯನಿಮಿತ್ತ ನಾನು ಪ್ರವಾಸಿ ವೀಸಾದ ಮೇಲೆ ದೆಹಲಿಗೆ ಆಗಮಿಸಿ ಕನ್ನೌಟ್ ಪ್ಲೇಸ್ ಬಳಿ ಪಂಚಾತಾರ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದೆ. ಹೋಟೆಲ್ ಸಿಬ್ಬಂದಿಯ ಸಲಹೆ ಮೇರೆಗೆ ಪ್ರವಾಸಿ ಮಾರ್ಗದರ್ಶಿಯನ್ನು ನೇಮಿಸಿಕೊಂಡೆ. ಆತ ನಗರದ ಪ್ರೇಕ್ಷಣೀಯ ಸ್ಥಳಗಳಲ್ಲಿ ನನ್ನನ್ನು ಸುತ್ತಾಡಿಸಿದ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. ಮರುದಿನ ನಾನು ಹೋಟೆಲ್ ಕೊಠಡಿಯಲ್ಲಿದ್ದಾಗ, ಮಾರ್ಗವೊಂದರ ನಕ್ಷೆ ಬಗ್ಗೆ ಚರ್ಚಿಸಬೇಕೆಂದು ಹೇಳಿಕೊಂಡು ಗೈಡ್ ಮತ್ತು ಆತನ ಸ್ನೇಹಿತರು ಕೊಠಡಿಗೆ ಬಂದರು. ಅವರೆಲ್ಲರೂ ಮದ್ಯಪಾನ ಮಾಡಿದ್ದರು. ನಂತರ ಗೈಡ್ ನನ್ನ ಮೇಲೆ ಅತ್ಯಾಚಾರ ಎಸಗಿದ. ಬಳಿಕ ಆತನ ಗೆಳೆಯರು ಗ್ಯಾಂಗ್‍ರೇಪ್ ಮಾಡಿದರು ಎಂದು ತಿಳಿಸಿದ್ದಾರೆ.

ಈ ಘಟನೆ ನಂತರ ಭಯಭೀತಳಾದ ನಾನು ಅಮೆರಿಕಾಕ್ಕೆ ತೆರಳಿದೆ. ನನ್ನ ಕುಟುಂಬಕ್ಕೆ ಈ ವಿಷಯ ತಿಳಿಸಲಿಲ್ಲ. ಹತಾಶಳಾದ ನಾನು ವಕೀಲೆಯಾದ ನನ್ನ ಗೆಳತಿಯನ್ನು ಸಂಪರ್ಕಿಸಿದೆ. ಆಕೆ ಭಾರತದ ಎನ್‍ಜಿಒ ಸಹಾಯ ಕೋರಿದಳು. ನಂತರ ಸಲಹೆ ಮೇರೆಗೆ ದೂರು ನೀಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಪ್ರಕರಣದ ಸಂಬಂಧ ದೆಹಲಿ ಪೊಲೀಸರು ಅಮೆರಿಕ ರಾಜತಾಂತ್ರಿಕ ಕಚೇರಿಯನ್ನು ಸಂಪರ್ಕಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin