ಭಾಗ್ಯಲಕ್ಷ್ಮಿ ಯೋಜನೆಗೆ ದಾಖಲೆಯನ್ನಾಗಿ ಪಡಿತರ ಚೀಟಿಯ ಬದಲಾಗಿ ಆಧಾರ್‍ಕಾರ್ಡ್ ಪರಿಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

UT-Khadar
ಬೆಳಗಾವಿ, ಡಿ.1- ಭಾಗ್ಯಲಕ್ಷ್ಮಿ ಯೋಜನೆಗೆ ಪಡಿತರ ಚೀಟಿಯ ಬದಲಾಗಿ ಆಧಾರ್‍ಕಾರ್ಡ್ ಅನ್ನೇ ದಾಖಲೆಯನ್ನಾಗಿ ಪರಿಗಣಿಸಲು ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.ಪ್ರಶ್ನೋತ್ತರ ಅವಧಿಯಲ್ಲಿ ನಿಪ್ಪಾಣಿ ಶಾಸಕ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ಅವರು, ಪಡಿತರ ಚೀಟಿಗಳ ಹಂಚಿಕೆಯನ್ನು ಸರ್ಕಾರ ನಿಲ್ಲಿಸಿದೆ. ಭಾಗ್ಯಲಕ್ಷ್ಮಿ ಯೋಜನೆಗೆ ಪಡಿತರ ಚೀಟಿ ಕಡ್ಡಾಯವಾಗಿ ಬೇಕು. ಆಹಾರ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಹಿಸಿದ ಸಚಿವರು, ಮುಂದಿನ ತಿಂಗಳಿನಿಂದ ಕಾರ್ಡ್ ಹಂಚಿಕೆ ಕಾರ್ಯಕ್ರವನ್ನು ಆರಂಭಿಸುವುದಾಗಿ ಹೇಳಿದರಲ್ಲದೆ, ಭಾಗ್ಯಲಕ್ಷ್ಮಿಯೋಜನೆಗೆ ಪಡಿತರ ಚೀಟಿ ಬದಲಾಗಿ ಆಧಾರ್‍ಕಾರ್ಡ್‍ನ್ನು ದಾಖಲೆಯಾಗಿ ತೆಗೆದುಕೊಳ್ಳುವುದು ಸೂಕ್ತವಾಗಿದೆ.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ ಜತೆ ಚರ್ಚಿಸಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.ತಾಲ್ಲೂಕು ಮಟ್ಟಕ್ಕೆ ಆಹಾರ ಶಿರಸ್ತೇದಾರ್ ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ತಾಲ್ಲೂಕು ಕೇಂದ್ರಗಳಿಲ್ಲದ ಕಡೆ ಹೆಚ್ಚುವರಿ ಕಾರ್ಯಭಾರವನ್ನು ನಿಭಾಯಿಸಲು ಆಹಾರ ಶಿರಸ್ತೇದಾರರ ನೇಮಕ ಮಾಡುವ ಬಗ್ಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಅವರು ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin