ಚೀನಾದಲ್ಲಿ ಮತ್ತೊಂದು ಕಲ್ಲಿದ್ದಲು ಗಣಿ ಸ್ಫೋಟ ದುರಂತ : 53 ಕಾರ್ಮಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

China-00666

ಬೀಜಿಂಗ್, ಡಿ.3-ಎರಡು ಕಲ್ಲಿದ್ದಲು ಗಣಿಗಳಲ್ಲಿ ಎರಡು ಭಾರೀ ಸ್ಫೋಟಗಳಿಂದಾಗಿ 53ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಘಟನೆ ಉತ್ತರ ಚೀನಾದಲ್ಲಿ ಚೀನಾದಲ್ಲಿ ಸಂಭವಿಸಿದೆ. ಜಗತ್ತಿನ ಅತ್ಯಧಿಕ ಕಲ್ಲಿದ್ದಲು ಉತ್ಪಾದಿಸುವ ದೇಶದ ಗಣಿ ಉದ್ಯಮದಲ್ಲಿ ಇತ್ತೀಚೆಗೆ ಸಂಭವಿಸಿದ ನಾಲ್ಕನೇ ಭೀಕರ ದುರಂತವಾಗಿದೆ. ಉತ್ತರ ಚೀನಾದ ಇನ್ನರ್ ಮಂಗೋಲಿಯಾದ ಸ್ವಾಯತ್ತ ಪ್ರಾಂತ್ಯದ ಬಾವೋಮಾ ಮೈನಿಂಗ್ ಕಂಪನಿ ಲಿಮಿಟೆಡ್‍ನಲ್ಲಿ ನಿನ್ನೆ ಭಾರೀ ಸ್ಫೋಟ ಸಂಭವಿಸಿ 32 ಮಂದಿ ಬಲಿಯಾದರು. 181 ಜನ ಕಾರ್ಮಿಕರು ಗಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸ್ಫೋಟ ಸಂಭವಿಸಿತು. 149 ಮಂದಿ ಮಾತ್ರ ಹೊರಬರಲು ಯಶಸ್ವಿಯಾದರು. ಪೊಲೀಸರು ಮತ್ತು ರಕ್ಷಣಾ ಕಾರ್ಯಕರ್ತರು ಶೋಧ ಮುಂದುವರಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಕ್ವಿಟೈ ಪಟ್ಟಣದ ಖಾಸಗಿ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿ 21 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಘೋಷಿಸಿದ್ದಾರೆ. ಗಣಿ ಮಾಲೀಕ ಮತ್ತು ಮ್ಯಾನೇಜರ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಗೌಜೌವು ಪ್ರಾಂತ್ಯದಲ್ಲಿ ಅ.31ರಂದು ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 33 ಕಾರ್ಮಿಕರು ಮೃತಪಟ್ಟಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin