ಪಾಕ್ ವಿರುದ್ಧ ಗೆದ್ದು ಟಿ-20 ಮಹಿಳಾ ಏಷ್ಯಾ ಕಪ್ ಚಾಂಪಿಯನ್ ಪಟ್ಟಕ್ಕೇರಿದ ಭಾರತದ ಮಹಿಳೆಯರು

ಈ ಸುದ್ದಿಯನ್ನು ಶೇರ್ ಮಾಡಿ

Cricket

ಬ್ಯಾಂಕಾಂಕ್, ಡಿ.4- ಇಲ್ಲಿ ನಡೆದ ಟಿ-20 ಫೈನಲ್‍ಪಂದ್ಯದಲ್ಲಿ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ 17 ರನ್‍ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.   ಏಷ್ಯಾ ಇನ್ಸ್‍ಟ್ಯೂಟ್ ಆಫ್ ಟೆಕ್ನಲಾಜಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ್ತಿ ಮಿಥಿಲಿ ರಾಜ್ ಅಜೇಯ 73 ರನ್‍ಗಳ ನೆರವುನಿಂದ ಭಾರತ ತಂಡ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಪೇರಿಸಿತು. ಉಳಿದ ಬ್ಯಾಟ್ಸ್‍ಮನಗಳಾದ ಮಂಧನಾ 6, ಮೇಘನಾ 9, ಕೃಷ್ಣಮೂರ್ತಿ 2, ಕೌರ್ 5, ಗೋಸ್ವಾಮಿ 17 ರನ್ ಗಳಿಸಿ ನಿರಾಸೆ ಮೂಡಿಸಿದರು.

122 ರನ್‍ಗಳ ಸವಾಲಿನ ಮೊತ್ತ ಬೆನ್ನತ್ತಿದ್ದ ಪಾಕ್, ಭಾರತದ ಸಾಂಘೀಕ ಬೌಲಿಂಗ್ ದಾಳಿಗೆ ನಲುಗಿ ಕೇವಲ 20 ಓವರ್‍ಗಳಲ್ಲಿ 6 ವಿಕೆಟ್‍ಗಳಿಗೆ 104 ರನ್ ಗಳಷ್ಟೇ ಶಕ್ತವಾಗಿ 17 ರನ್‍ಗಳ ಅಂತರದಿಂದ ಸೋಲಪ್ಪಿಕೊಂಡಿತು. ಭಾರತ ಪರ ಏಕ್ತಾ ಬಿಸ್ತ್ 2 ಪಡೆದರೆ, ಅನುಜಾ ಪಟೇಲ್, ಗೋಸ್ವಾಮಿ, ಪಾಂಡೇ ಮತ್ತು ಪ್ರೀತಿ ಬೋಸ್ ತಲಾ1 ವಿಕೆಟ್ ಕಬಳಿಸಿದರು. ಟೂರ್ನಿ ಹಾಗೂ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಮಿಥುಲಿ ರಾಜ್ ಪಂದ್ಯ ಪರುಷೋತ್ತಮ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಭಾರತ 20 ಓವರ್, 121/5
sಪಾಕಿಸ್ತಾನ 20 ಓವರ್, 104/6

Facebook Comments

Sri Raghav

Admin