ಫೋಟೋ,ವಿಡಿಯೋಗಳನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Model

ಬೆಂಗಳೂರು, ಡಿ.4– ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಬೆದರಿಕೆಯೊಡ್ಡಿ ಮಾಡೆಲ್ ಒಬ್ಬಳಿಗೆ  1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಹಣ ನೀಡುವ ನೆಪದಲ್ಲಿ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳಾದ ಕಿರಣ್, ಅಶ್ವಿನ್ ಮೋಪಿನ್, ಅಕ್ಷಯ್ ಬಂಧಿತ ಆರೋಪಿಗಳು.
ಬೆಂಗಳೂರಿನ ಹೊಸಪಾಳ್ಯದ ನಿವಾಸಿಗಳಾದ ಇವರು ಅ.4ರಂದು ಯುವತಿಯ ಸ್ನೇಹಿತನ ಮೊಬೈಲ್ ಕಳವು ಮಾಡಿದ್ದರು. ಮೊಬೈಲ್ ಕಳುವಾದ ಬಗ್ಗೆ ಅಂದೇ ಪೊಲೀಸರಿಗೆ ದೂರು ನೀಡಲಾಗಿತ್ತು. ಮೊಬೈಲ್ ಕಳವು ಮಾಡಿದ್ದ ಆರೋಪಿಗಳು ಅದರಲ್ಲಿದ್ದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಯುವತಿಗೆ ಬೆದರಿಸಲು ಆರಂಭಿಸಿದರು. ಜತೆಗೆ 1 ಲಕ್ಷ ರೂ. ನೀಡಿದರೆ ಫೋಟೋ, ವಿಡಿಯೋ ಹಾಕುವುದಿಲ್ಲ ಎಂದು ಹೇಳಿದ್ದರಿಂದ ಹಣ ನೀಡುವ ನೆಪದಲ್ಲಿ ಕರೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin