ಬಯಲಾಯ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ..!
ಕೊಲ್ಕತಾ, ಡಿ.4-ದೇಶದ ಅಪ್ರತಿಮ ಸ್ವಾತಂತ್ರ ನೇತಾಜಿ ಸುಭಾಷ್ ಚಂದ್ರ ಬೋಸ್ 18ನೇ ಆಗಸ್ಟ್, 1945ರಲ್ಲಿ ತೈವಾನ್ನ ತೈಪೆ ಬಳಿ ಸಂಭವಿಸಿದ ವಿಮಾನ ಅಪಘಾತದಿಂದಲೇ ಮೃತಪಟ್ಟಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಬಲವಾದ ಸಾಕ್ಷ್ಯಾಧಾರ ಇದೆ ಎಂದು ಅವರ ಮೊಮ್ಮಗ ಮತ್ತು ಸಂಶೋಧಕ ಅಶೀಶ್ ರಾಯ್ ಹೇಳಿಕೊಂಡಿದ್ದಾರೆ. ರೆಂಕೋಜಿ ದೇಗುಲದಲ್ಲಿರುವ ಸುಭಾಷ್ಚಂದ್ರ ಬೋಸ್ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕು ಎಂದು ಆಗ್ರಹಿಸಿರುವ ಅವರು, 1945ರಲ್ಲಿ ಬೋಸ್ ಅವರು ವಿಮಾನ ಅಪಘಾತದಲ್ಲಿ ಮಡಿದರು ಎಂಬುದನ್ನು ತಿಳಿಸುವ ಮೂರು ವರದಿಗಳಿವೆ. ಎರಡು ವರದಿಗಳನ್ನು ಜಪಾನ್ ಸರ್ಕಾರ ನೀಡಿದೆ ಹಾಗೂ ಇನ್ನೊಂದು ವರದಿ ರಷ್ಯಾ ಬಳಿ ಇದೆ ಎಂದು ತಿಳಿಸಿದ್ದಾರೆ. ಬೋಸ್ ಅವರನ್ನು ಯುಎಸ್ಎಸ್ಆರ್ನ (ಈಗಿನ ರಷ್ಯಾ) ಕಾರಾಗೃಹದಲ್ಲಿ ಬಂಧಿಸಲಾಗಿತ್ತು ಎಂಬ ವರದಿಯನ್ನು ಅವರು ತಳ್ಳಿ ಹಾಕಿದ್ದಾರೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download
Facebook Comments