ಬಿಗಿಭದ್ರತೆ ನಡುವೆ ನಡೆದ ಪಿಎಸ್‍ಐ ಹುದ್ದೆಗಳಿಗೆ ಲಿಖಿತ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Exam-01

ಬೆಂಗಳೂರು, ಡಿ.4-ಸಿವಿಲ್ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ (ಪುರುಷ ಮತ್ತು ಮಹಿಳೆ) ಹುದ್ದೆಗಳ ನೇಮಕಾತಿಗೆ ಇಂದು ರಾಜ್ಯದ ನಾಲ್ಕು ಕಡೆ ಲಿಖಿತ ಪರೀಕ್ಷೆ ನಡೆಯಿತು. ಒಟ್ಟು 398 ಸಬ್‍ಇನ್ಸ್‍ಪೆಕ್ಟರ್ ಹುದ್ದೆಗೆ 35 ಸಾವಿರ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ತೆಗೆದುಕೊಂಡಿದ್ದಾರೆ.  ಬೆಂಗಳೂರು, ಮೈಸೂರು, ಗುಲ್ಬರ್ಗ, ಹುಬ್ಬಳ್ಳಿಯಲ್ಲಿ ಲಿಖಿತ ಪರೀಕ್ಷೆ ನಡೆಯಿತು. ಬೆಳಗ್ಗೆ ಒಂದು ಪೇಪರ್, ಮಧ್ಯಾಹ್ನ ಒಂದು ಪೇಪರ್ ಲಿಖಿತ ಪರೀಕ್ಷೆ ನಡೆಯಿತು. ನಗರದ 17 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 13,900 ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಯಿತು.  ಮೈಸೂರಿನ 16 ಕೇಂದ್ರಗಳಲ್ಲಿ 6676 ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆದಿದ್ದಾರೆ. ಎಲ್ಲ ಕೇಂದ್ರಗಳಲ್ಲೂ ಬಿಗಿಭದ್ರತೆ ಒದಗಿಸಲಾಗಿತ್ತು.

ಮೈಸೂರು : 

ಮೈಸೂರು, ಡಿ.4- ರಾಜ್ಯದಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಗರದಲ್ಲಿ 16  ಕೇಂದ್ರಗಳಲ್ಲಿ ಪೊಲೀಸ್ ಭದ್ರತೆಯೊಂದಿಗೆ ಇಂದು ಲಿಖಿತ ಪರೀಕ್ಷೆ ನಡೆಯಿತು. ನಗರದ ವಿದ್ಯಾವಿಕಾಶ್, ವಿದ್ಯವರ್ಧಕ, ಸಂತಫಿಲೋಮಿನ, ಮಹಾಜನ ಕಾಲೇಜು ಸೇರಿದಂತೆ 16 ಕೇಂದ್ರಗಳಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ ಒಟ್ಟು 6.676 ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಕೇಂದ್ರದಲ್ಲಿ ಬಯೋಮೆಟ್ರಿಕ್ ಗುರುತು ಮೂಲಕ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಅಭ್ಯರ್ಥಿಗಳು ನಕಲು ಮಾಡದಂತೆ ನಿಗಾ ವಹಿಸಿಲಾಯಿತು. ಪರೀಕ್ಷೆ ಕಾರ್ಯಕ್ಕೆ 8 ಡಿವೈಸ್‍ಪಿ ಮಟ್ಟದ ಅಧಿಕಾರಿಗಳು, ಪ್ರತಿ 200 ಅಭ್ಯರ್ಥಿಗಳಿಗೆ ಓರ್ವ ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin