62,000 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳಿಗೆ ರಾಜ್ಯಗಳ ಸಹಭಾಗಿತ್ವ

ಈ ಸುದ್ದಿಯನ್ನು ಶೇರ್ ಮಾಡಿ

Train-01

ನವದೆಹಲಿ, ಡಿ.4- ಹೊಸ ಮಾರ್ಗಗಳ ತ್ವರಿತ ಅನುಷ್ಠಾನ ಮತ್ತು ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ 62,000 ಕೋಟಿ ರೂ. ಮೌಲ್ಯ ರೈಲ್ವೆ ಯೋಜನೆಗಳಿಗೆ ಈವರೆಗೆ 14 ರಾಜ್ಯಗಳು ಸ್ಪಂದಿಸಿವೆ. ಈ ವಿಷಯ ತಿಳಿಸಿರುವ ರೈಲ್ವೆ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು, ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಈ ಮಹತ್ವದ ಯೋಜನೆಗಳಲ್ಲಿ ಸಹಭಾಗಿತ್ವ ವಹಿಸುವಂತೆ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಈವರೆಗೆ 16 ರಾಜ್ಯಗಳು 62,379 ಕೋಟಿ ರೂ. ಮೌಲ್ಯ 43 ಯೋಜನೆಗಳಲ್ಲಿ ವೆಚ್ಚವನ್ನು ಹಂಚಿಕೊಳ್ಳಲು ಮುಂದೆ ಬಂದಿವೆ ಎಂದು ತಿಳಿಸಿದ್ದಾರೆ. ಈ ಎಲ್ಲ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಲಭ್ಯವಿರುವ ಬಜೆಟ್ ಸಂಪನ್ಮೂಲಕ್ಕಿಂತ ಹೆಚ್ಚಿನ ಹಣವನ್ನು ಕ್ರೋಢೀಕರಿಸಲು ರೈಲ್ವೆ ಸಚಿವಾಲಯ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin