82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

aaa

ರಾಯಚೂರು,ಡಿ.4- ಎಡದೊರೆ ಊರು, ಬಿಸಿಲ ನಾಡು, ಗಡಿ ಭಾಗ ವಾದ ರಾಯಚೂರಿನಲ್ಲಿ ಮೂರು ದಿನಗಳ ಕಾಲ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವಿದ್ಯುಕ್ತವಾಗಿ ತೆರೆಬಿತ್ತು. ಬೀದರ್‍ನಿಂದ ಕೋಲಾರದವರೆಗೆ, ಬಳ್ಳಾರಿಯಿಂದ ಚಾಮರಾಜನಗರದವರೆಗೆ ಹರಿದು ಬಂದಿದ್ದ ಲಕ್ಷಾಂತರ ಜನ, ಕನ್ನಾಡಿಭಿಮಾನಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಿಸಿಲನ್ನ, ಧೂಳನ್ನು ಲೆಕ್ಕಿಸದೆ ನಾಡ ತಾಯಿ ಭುವನೇಶ್ವರಿ ಜಾತ್ರೆಯನ್ನು ಕಣ್ತುಂಬಿಕೊಂಡರು. ಗೋಷ್ಠಿಗಳ ಮೂಲಕ ನಾಡಿನ ಚರಿತ್ರೆ, ಪ್ರಚಲಿತ ವಿದ್ಯಾಮಾನಗಳನ್ನು, ಅಸಮಾನತೆಯ ವಿವರಗಳು, ಪರಿಹಾರಗಳನ್ನು ಕಂಡುಕೊಂಡರು. ವೇದಿಕೆಯಲ್ಲಿದ್ದವರು ಉತ್ತರ ಕರ್ನಾಟಕ ಭಾಗದ ನೀಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

Rotti

ತಮ್ಮ ಸಿಟ್ಟು-ಸೆಡವುಗಳನ್ನು ಪ್ರದರ್ಶಿಸಿದರು. ರಾಜ್ಯದಲ್ಲಿ ಸಾಹಿತ್ಯಾಸಕ್ತರು, ಓದುಗರು ಒಂದೆಡೆ ಸೇರಲು ಸಾಹಿತ್ಯ ಸಮ್ಮೇಳನವೇ ಒಂದು ವೇದಿಕೆ. ಅದಕ್ಕೆ ದೂರದೂರದ ರಾಯಚೂರು ಸಾಕ್ಷಿಯಾಯಿತು. ಆರು ದಶಕದ ನಂತರ ನಡೆದ ಅಕ್ಷರ ಜಾತ್ರೆಗೆ ಅಕ್ಷೋಹಿಣಿ ಮಾದರಿಯಲ್ಲಿ ಜನ ಹರಿದು ಬಂದಿದ್ದರು. ತಮ್ಮ ತಾತ್ವಿಕತೆಯನ್ನು, ಸಾಹಿತ್ಯ ಅಭಿರುಚಿಯನ್ನು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಕವಿಗಳು ಪ್ರಚುರ ಪಡಿಸಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಹಾಗೂ ಪದಾಧಿಕಾರಿಗಳ ಪಾದರಸದಂತಹ ಓಡಾಟ, ಅಚ್ಚುಕಟ್ಟಾದ ಕೆಲಸ ಮೆಚ್ಚುವಂತದ್ದಾಗಿತ್ತು. ಮುಂದಿನ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಈ ಸಮ್ಮೇಳದ ಯಶಸ್ವಿ ಮುನ್ನುಡಿ ಬರೆದಿತ್ತು. ಮೊದಲನೆ ದಿನದ ಅದ್ಧೂರಿ ಆರಂಭದ ಎಲ್ಲ ಗೋಷ್ಠಿಗಳು ಚಾಚು ತಪ್ಪದೆ ನಡೆದಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಮೊನಚಾದ ಭಾಷಣ ನಾಡಿನ ಜನರನ್ನ ಮಿಡಿಯುವಂತೆ ಮಾಡಿತ್ತು. ಲಕ್ಷಾಂತರ ಜನರನ್ನು ವೇದಿಕೆಯಲ್ಲಿ ಹಿಡಿದು ಕೂರಿಸಿತ್ತು.

ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

AMB_1163

ಮೈಸೂರಿಗೆ ಅವಕಾಶ ಸಿಕ್ಕಿರುವುದು ಅರ್ಥಪೂರ್ಣ

ರಾಯಚೂರು, ಡಿ.4- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಸಿಕ್ಕಿರುವುದು ಅರ್ಥಪೂರ್ಣ ಮತ್ತು ಅದೃಷ್ಟ ಎಂದು ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಮೈಸೂರಿಗೆ ಸಾಹಿತ್ಯ ಸಮ್ಮೇಳನ ನಡೆಸುವ ಆತಿಥ್ಯ ದೊರೆತಿರುವುದು ಹೆಮ್ಮೆಯ ವಿಷಯ ಎಂದರು.
27 ವರ್ಷಗಳ ನಂತರ ಈ ಅವಕಾಶ ಸಿಕ್ಕಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ಎಲ್ಲರ ಸಹಕಾರ, ಸಲಹೆಗಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಇಲ್ಲಿ ನೆರವೇರಿಸಲಿದೆ. 1990ರಲ್ಲಿ 60ನೇ ಸಮ್ಮೇಳನ ಮೈಸೂರಿನಲ್ಲಿ ನಡೆದಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಶಿವರಾಮ ಕಾರಂತರು ಸರ್ವಾಧ್ಯಕ್ಷರಾಗಿದ್ದರು. ಅದಕ್ಕೂ ಹಿಂದೆ ಆಲೂರು ವೆಂಕಟರಾಯರು ಸರ್ವಾಧ್ಯಕ್ಷರಾಗಿದ್ದರು ಎಂದು ವಿವರಿಸಿದರು.

 

AMB_1171

ಸಾಹಿತಿಗಳಿಗೆ ಖಾಕಿ ಅಪಮಾನ:ಮಲ್ಲಿಕಾ ಅಸಮಾಧಾನ

ರಾಯಚೂರು, ಡಿ.4- ಸಾಹಿತ್ಯ ಸಮ್ಮೇಳನಕ್ಕೆ ಬಂದ ಸಾಹಿತಿ ಗಳಿಗೆ ಪೊಲೀಸರು ಅಗೌರವ ತೋರಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಯಾರೂ ಇತ್ತ ಸುಳಿಯು ವುದಿಲ್ಲ ಎಂದು ಹಂಪಿ ಕನ್ನಡ ವಿವಿ ಉಪ ಕುಲಪತಿ ಮಲ್ಲಿಕಾ ಘಂಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಮುಖ್ಯ ವೇದಿಕೆಯ ಬಳಿ ಇಂದು ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ವೀಕ್ಷಿಸಲು ರಾಜ್ಯದ ಹಲವಾರು ಮೂಲೆಗಳಿಂದ ಗಣ್ಯರು, ಹಿರಿಯ ಸಾಹಿತಿಗಳು ಆಗಮಿಸಿದ್ದರು. ಆದರೆ ವೇದಿಕೆ ಸಮೀಪದ ಆಸನಗಳತ್ತ ತರಲು ತಡೆದಿದ್ದಲ್ಲದೆ ಕೆಲವರನ್ನು ಗದರಿಸಿ ನಿಂದಿಸಿ ಕಳುಹಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನದಲ್ಲೇ ಈ ರೀತಿಯಾದರೆ ಮುಂದಿನ ದಿನಗಳಲ್ಲೇ ಯಾರು ತಾನೆ ಬರುತ್ತಾರೆ? ಕೂಡಲೇ ಇಂತಹ ಅಚಾತುರ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಾ ಗಿದೆ ಎಂದರು. ಇದೇ ರೀತಿ ಕೆಲವು ಸಾಹಿತಿಗಳು ಕೂಡ ಇಲ್ಲಿನ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೊನೆಯ ದಿನದ ಕಾರ್ಯಕ್ರಮಕ್ಕೆ ಸಾಗರೋಪಾದಿಯಲ್ಲಿ ಜನರು ಆಗಮಿಸಿದ್ದರು. ಅವರನ್ನು ನಿಭಾಯಿಸಲು ಸಂಘಟಕರು ಹಾಗೂ ಪೊಲೀಸರು ಹರಸಾಹಸ ಪಡಬೇಕಾಯಿತು.

 

AMB_1188

ಅಕ್ಷರ ಜಾತ್ರೆಗೆ ಹರಿದು ಬಂದ ಜನಸಾಗರ

ರಾಯಚೂರು,ಡಿ.4- ಎಡದೊರೆ ಊರು, ಬಿಸಿಲ ನಾಡು, ಗಡಿ ಭಾಗ ವಾದ ರಾಯಚೂರಿನಲ್ಲಿ ಮೂರು ದಿನಗಳ ಕಾಲ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ವಿದ್ಯುಕ್ತವಾಗಿ ತೆರೆಬಿತ್ತು.  ಬೀದರ್‍ನಿಂದ ಕೋಲಾರದವರೆಗೆ, ಬಳ್ಳಾರಿಯಿಂದ ಚಾಮರಾಜನಗರದವರೆಗೆ ಹರಿದು ಬಂದಿದ್ದ ಲಕ್ಷಾಂತರ ಜನ, ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಿಸಿಲು, ಧೂಳನ್ನು ಲೆಕ್ಕಿಸದೆ ನಾಡ ತಾಯಿ ಭುವನೇಶ್ವರಿ ಜಾತ್ರೆಯನ್ನು ಕಣ್ತುಂಬಿಕೊಂಡರು. ಗೋಷ್ಠಿಗಳ ಮೂಲಕ ನಾಡಿನ ಚರಿತ್ರೆ, ಪ್ರಚಲಿತ ವಿದ್ಯಮಾನಗಳನ್ನು, ಅಸಮಾನತೆಯ ವಿವರಗಳು, ಪರಿಹಾರಗಳನ್ನು ಕಂಡುಕೊಂಡರು. ವೇದಿಕೆಯಲ್ಲಿದ್ದವರು ಉತ್ತರ ಕರ್ನಾಟಕ ಭಾಗದ ನೀಗದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ತಮ್ಮ ಸಿಟ್ಟು-ಸೆಡವುಗಳನ್ನು ಪ್ರದರ್ಶಿಸಿದರು. ರಾಜ್ಯದಲ್ಲಿ ಸಾಹಿತ್ಯಾಸಕ್ತರು, ಓದುಗರು ಒಂದೆಡೆ ಸೇರಲು ಸಾಹಿತ್ಯ ಸಮ್ಮೇಳನವೇ ಒಂದು ವೇದಿಕೆ. ಅದಕ್ಕೆ ದೂರದೂರದ ರಾಯಚೂರು ಸಾಕ್ಷಿಯಾಯಿತು. ಆರು ದಶಕದ ನಂತರ ನಡೆದ ಅಕ್ಷರ ಜಾತ್ರೆಗೆ ಅಕ್ಷೋಹಿಣಿ ಮಾದರಿಯಲ್ಲಿ ಜನ ಹರಿದು ಬಂದಿದ್ದರು.
ತಮ್ಮ ತಾತ್ವಿಕತೆಯನ್ನು, ಸಾಹಿತ್ಯ ಅಭಿರುಚಿಯನ್ನು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಕವಿಗಳು ಪ್ರಚುರ ಪಡಿಸಿದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಹಾಗೂ ಪದಾಧಿಕಾರಿಗಳ ಪಾದರಸದಂತಹ ಓಡಾಟ, ಅಚ್ಚುಕಟ್ಟಾದ ಕೆಲಸ ಮೆಚ್ಚುವಂತದ್ದಾಗಿತ್ತು.

ಮುಂದಿನ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಈ ಸಮ್ಮೇಳದ ಯಶಸ್ವಿ ಮುನ್ನುಡಿ ಬರೆದಿತ್ತು. ಮೊದಲನೆ ದಿನದ ಅದ್ಧೂರಿ ಆರಂಭದ ಎಲ್ಲ ಗೋಷ್ಠಿಗಳು ಚಾಚು ತಪ್ಪದೆ ನಡೆದಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾದ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಮೊನಚಾದ ಭಾಷಣ ನಾಡಿನ ಜನರನ್ನ ಮಿಡಿಯುವಂತೆ ಮಾಡಿತ್ತು. ಲಕ್ಷಾಂತರ ಜನರನ್ನು ವೇದಿಕೆಯಲ್ಲಿ ಹಿಡಿದು ಕೂರಿಸಿತ್ತು. ಆರಂಭದಲ್ಲಿ ಸಣ್ಣಪುಟ್ಟ ಅವ್ಯವಸ್ಥೆಗಳು ಕಂಡು ಬಂದವಾದರೂ ನುಡಿ ಜಾತ್ರೆಯ ಸಡಗರದ ನಡುವೆ ಇವೆಲ್ಲ ಗೌಣವಾಗಿದ್ದವು. ರಾಜಕಾರಣಿಗಳು, ಸಾಹಿತಿಗಳು, ಸಾರ್ವಜನಿಕರನ್ನು ಒಂದೇ ವೇದಿಕೆಗೆ ತರುವ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಜಿಲ್ಲಾಡಳಿತ, ಸಾಹಿತ್ಯ ಪರಿಷತ್, ಸರ್ಕಾರ ಪಾತ್ರವಾಗಿತ್ತು.

AMB_1302

DSC_0809

DSC_0892

DSC_0916

DSC_1057

DSC_1659

DSC_1747

DSC_1779

DSC_1827

DSC_1907

DSC_1989

DSC_2023

Kannada

 

Facebook Comments

Sri Raghav

Admin