ಪಾಕಿಸ್ತಾನದ ರಾಚಿ ಹೋಟೆಲೊಂದರಲ್ಲಿ ಭೀಕರ ಬೆಂಕಿ ದುರಂತ : 11 ಮಂದಿ ಸಜೀವ ದಹನ
ಕರಾಚಿ, ಡಿ.5-ಐಷಾರಾಮಿ ಹೋಟೆಲೊಂದರಲ್ಲಿ ಭೀಕರ ಬೆಂಕಿ ಭುಗಿಲೆದ್ದು 11ಕ್ಕೂ ಹೆಚ್ಚು ಜನ ಮೃತಪಟ್ಟು, ಇತರ 30 ಮಂದಿ ಗಾಯಗೊಂಡಿರುವ ಘಟನೆ ಇಂದು ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ಸಂಭವಿಸಿದೆ. ನಗರದ ಶರ್ಹಾಹ್-ಎ-ಫೈಸಲ್ನ ರೆಜೆಂಟ್ ಫ್ಲಾಜಾ ಚರ್ತುತಾರಾ ಹೋಟೆಲ್ನ ನೆಲ ಅಂತಸ್ತಿನ ಪಾಕಶಾಲೆಯಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ನಿಮಿಷಗಳಲ್ಲಿ ಆರು ಮಹಡಿಗಳ ಕಟ್ಟಡವನ್ನು ಆವರಿಸಿತು. ಬೆಂಕಿ ದುರಂತದಲ್ಲಿ ಹೋಟೆಲ್ ಕೊಠಡಿಗಳಲ್ಲಿದ್ದ ಸುಮಾರು 100 ಮಂದಿ ಅಪಾಯಕ್ಕೆ ಸಿಲುಕಿದ್ದರು ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
> ಪಾಕಿಸ್ತಾನದ ರಾಚಿ ಹೋಟೆಲೊಂದರಲ್ಲಿ ಭೀಕರ ಬೆಂಕಿ ದುರಂತ : 11 ಮಂದಿ ಸಜೀವ ದಹನ
Read ; https://t.co/O55rG9jzP8#11dead #HotelFire #Karachi #ಕರಾಚಿ pic.twitter.com/X9qjP9jbDU— EeSanjeNews l ಈ ಸಂಜೆ (@eesanjenews) December 5, 2016
ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಮೂವರು ಮಹಿಳೆಯರೂ ಸೇರಿದಂತೆ 11 ಮಂದಿ ಸಾವಿಗೀಡಾದರು, ಗಾಯಗೊಂಡ 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಹೊಟೇಲ್ನಲ್ಲಿ ಸಿಲುಕಿದ್ದ ಇತರರನ್ನು ರಕ್ಷಿಸಿದರು. ಮೂರು ಗಂಟೆಗಳ ಶ್ರಮದ ನಂತರ ಬೆಂಕಿ ಜ್ವಾಲೆಗಳು ನಿಯಂತ್ರಣಕ್ಕೆ ಬಂದವು. ಸ್ಥಳಕ್ಕೆ ಕರಾಚಿ ಮೇಯರ್ ವಾಸೀಂ ಅಖ್ತರ್ ಭೇಟಿ ನೀಡಿ ಪರಿಶೀಲಿಸಿದರು.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download