ಭಾರತ ರತ್ನ ಉಸ್ತಾದ್ ಬಿಸ್ಮಾಲ್ಲಾ ಖಾನ್‍ರ ಐದು ಶಹನಾಯ್’ಗಳು ಕಳವು

ಈ ಸುದ್ದಿಯನ್ನು ಶೇರ್ ಮಾಡಿ

Bismillha-khan

ವಾರಣಾಸಿ, ಡಿ.5- ಶಹನಾಯ್ ಮಾಂತ್ರಿಕ ಭಾರತರತ್ನ ದಿವಂಗತ ಉಸ್ತಾದ್ ಬಿಸ್ಮಾಲ್ಲಾ ಖಾನ್ ಅವರ ಐದು ಶಹನಾಯ್‍ಗಳು ಕಳುವಾಗಿರುವ ಘಟನೆ ವಾರಣಾಸಿಯ ಅವರ ಪುತ್ರ ಕಾಜೀಂ ಹುಸೇನ್ ಅವರ ಮನೆಯಲ್ಲಿ ನಡೆದಿದೆ. ಕಳುವಾಗಿರುವ ಶಹನಾಯ್ ವಾದನಗಳಲ್ಲಿ ನಾಲ್ಕು ಬೆಳ್ಳಿಯಿಂದ ತಯಾರಿಸಿದ್ದಾಗಿದೆ. ಅಲ್ಲದೇ ಇವುಗಳನ್ನು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್, ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್ ಉಡುಗೊರೆಯಾಗಿ ನೀಡಿದ್ದರು. ಈ ಮೌಲ್ಯಯುತ ಶಹನಾಯ್‍ಗಳು ಕಳವಾಗಿರುವುದರಿಂದ ಕುಟುಂಬದ ಸದಸ್ಯರು ತೀವ್ರ ಬೇಸರಗೊಂಡಿದ್ದಾರೆ.

ವಾರಾಣಾಸಿಯ ಡಾಲ್‍ಮಂಡಿ ಪ್ರದೇಶದ ನಮ್ಮ ಹೊಸ ಮನೆಯಿಂದ ಐದು ಶಹನಾಯ್‍ಗಳು ಕಳ್ಳತನವಾಗಿವೆ. ಇವುಗಳಲ್ಲಿ ನಾಲ್ಕು ವಾದನಗಳು ಬೆಳ್ಳಿಯವು. ಒಂದು ಮರ ಮತ್ತು ಬೆಳ್ಳಿಯಿಂದ ನಿರ್ಮಿತವಾಗಿದ್ದವು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ರಾಝಿ ಹಸನ್ ಭಾಷಾ ತಿಳಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin