ಜಯಲಲಿತಾ ಅಂತಿಮ ಯಾತ್ರೆ : ಕೋಟಿ ಕೋಟಿ ಜನರಿಂದ ಕಣ್ಣೀರ ವಿದಾಯ

ಈ ಸುದ್ದಿಯನ್ನು ಶೇರ್ ಮಾಡಿ

Jaya-Finaa

ಚೆನ್ನೈ. ಡಿ. 06 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಅಂತಿಮ ಯಾತ್ರೆ ಆರಂಭವಾಗಿದ್ದು, ರಾಜಾಜಿ ಹಾಲ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಹೊತ್ತ ವಾಹನ ಮರೀನ ಬೀಚ್ಗೆ ಮೆರವಣಿಗೆ ಮೂಲಕ ಸಾಗಿದೆ. ಗಣ್ಯರು ಹಾಗೂ ಸಾರ್ವಜನಿಕರ ದರ್ಶನದ ಬಳಿಕ 4.25ಕ್ಕೆ ಅಲ್ಲಿಂದ ಪುಷ್ಪಗಳಿಂದ ಅಲಂಕರಿಸಿರುವ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತರಲಾಗುತ್ತಿದೆ.

Jjjjjjjjjjjjjjjj

ಲಕ್ಷಾಂತರ ಮಂದಿ ಅಗಲಿದ ನಾಯಕಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದ ಜಯಲಲಿತಾರ ಪಾರ್ಥಿವ ಶರೀರವನ್ನು ಮೊದಲಿಗೆ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಕೊಂಡೊಯ್ದು ಬಳಿಕ ರಾಜಾಜಿ ಹಾಲ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಶ್ರೀಸಾಮಾನ್ಯರಿಂದ ಹಿಡಿದು ಗಣ್ಯ ವ್ಯಕ್ತಿಗಳವರೆಗೆ ಸಂಜೆ 4-30 ರ ತನಕ ಲಕ್ಷಾಂತರ ಮಂದಿ ಅಂತಿಮ ದರ್ಶನ ಪಡೆದಿದ್ದಾರೆ. ನಂತರ ರಾಜಾಜಿ ಮೈದಾನದಿಂದ ಅಂತ್ಯಕ್ರಿಯೆ ನೆರವೇರಿಸುವ ಮರೀನಾ ಬೀಚ್ ಗೆ ಪಾರ್ಥಿವ ಶರೀರವನ್ನು ವಿಶೇಷವಾಗಿ ಅಲಂಕೃತಗೊಂಡಿದ್ದ ವಾಹನದಲ್ಲಿ ಕೊಂಡೊಯ್ಯಲಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ನೆಚ್ಚಿನ ನಾಯಕಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಪಾರದರ್ಶಕ ಶವಪೆಟ್ಟಿಗೆಯಲ್ಲಿ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಇರಿಸುತ್ತಿದ್ದಂತೆ ದರ್ಶನ ಪಡೆಯದ ಅಭಿಮಾನಿಗಳು ಗದ್ದಲ ಪ್ರಾರಂಭಿಸಿದರು.

ಮಿಲಿಟರಿ ಭದ್ರತೆಯಲ್ಲಿ ಸಾರ್ವತ್ರಿಕ ದರ್ಶನವಾಗುವಂತೆ ಜಯಾ ಪಾರ್ಥಿವ ಶರೀರವನ್ನು ಮಿಲಿಟರಿ ವಾಹನದಲ್ಲಿರಿಸಿದ್ದು ಮರೀನಾ ಬೀಚ್ ಬಳಿಗೆ ಸಂಸ್ಕಾರ ಯಾತ್ರೆ ಪ್ರಾರಂಭವಾಗಿದ್ದು, ಅಭಿಮಾನಿಗಳು, ಪಕ್ಷದ ಕಾರ್ಯ ಕರ್ತರು ಜೊತೆಯಲ್ಲಿ ಸಾಗಿದರು.

ಜಯಲಲಿತಾರಿಗೆ ಪ್ರಧಾನಿ ಭಾವಪೂರ್ಣ ನಮನ

ಜಯಲಲಿತಾ ವಿಧವಶ ಹಿನ್ನೆಲೆ ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಚೆನ್ನೈಗೆ ಆಗಮಿಸಿದ್ದು ಕೆ. ಜಯಲಲಿತಾರಿಗೆ ಭಾವಪೂರ್ಣ ನಮನ ಸಲ್ಲಿಸಿದರು. ಇದೇ ವೇಳೆ ಜಯಲಲಿತಾರ ಆಪ್ತೆ ಶಶಿಕಲಾ ಮತ್ತು ತಮಿಳುನಾಡು ಸಚಿವ ಪನ್ನೀರು ಸೆಲ್ವಂ ಅವರಿಗೆ ಸ್ವಾಂತನ ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin