ಜಯಲಲಿತಾ ಬಗ್ಗೆ ತಮಿಳಿಗರಿಗೇಷ್ಟು ಪ್ರೀತಿ..?

ಈ ಸುದ್ದಿಯನ್ನು ಶೇರ್ ಮಾಡಿ

Jayalalitha-0001

ಚೆನ್ನೈ, ಡಿ.6-ಜಯಲಲಿತಾ ಬಗ್ಗೆ ತಮಿಳು ಜನರಿಗೆ ಏಕಿಷ್ಟು ಪ್ರೀತಿ? ಅಮ್ಮ ಎಂದು ಕರೆಯುವಂಥ ಅಂತಃಕರಣ ಏಕೆ? ಆಕೆ ಸಾವಿನ ನಂತರವೂ ಉಳಿದಿರುವ ಜನಪ್ರಿಯ ಯೋಜನೆಗಳೇ ಈ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತವೆ. ಆಕೆ ಜನಪ್ರಿಯ ನಾಯಕಿ ಎಂಬುದರಲ್ಲಿ ಎರಡು ಮಾತಿಲ್ಲ. ಜಯಲಲಿತಾ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಜನಪ್ರಿಯ ಯೋಜನೆಗಳ ಮಾಹಿತಿ ಇಲ್ಲಿದೆ.
ಎಲ್ಲ ಮಹಿಳೆಯರೇ ಇರುವ ಪೊಲೀಸ್ ಠಾಣೆ ಮಹಿಳೆಯರೇ ಇರುವ ಪೊಲೀಸ್ ಠಾಣೆಯನ್ನು ಮೊದಲಿಗೆ 1992ರಲ್ಲಿ ಆರಂಭಿಸಲಾಯಿತು. ಸದ್ಯಕ್ಕೆ ಅಂಥ 200 ಪೊಲೀಸ್ ಠಾಣೆ ತಮಿಳುನಾಡಿನಲ್ಲಿ ಇವೆ. ಶೇ 40ರಷ್ಟು ಅಂಥ ಪೊಲೀಸ್ ಠಾಣೆಗಳು ತಮಿಳುನಾಡಿನಲ್ಲಿವೆ.

ಮಗು ತೊಟ್ಟಿಲು ಯೋಜನೆ : 

ಈ ಯೋಜನೆ 1992ರಲ್ಲಿ ಸೇಲಂನಲ್ಲಿ ಆರಂಭಿಸಲಾಯಿತು. ಈ ಯೋಜನೆ ಉದ್ದೇಶವು ಹೆಣ್ಣುಮಕ್ಕಳ ಲಿಂಗಾನುಪಾತವನ್ನು ಹೆಚ್ಚಿಸುವುದಾಗಿತ್ತು. ಹೆಣ್ಣುಮಕ್ಕಳ ಭ್ರೂಣ ಹತ್ಯೆ ತಡೆಯುವುದಾಗಿತ್ತು. 2011ರ ವೇಳೆಗೆ ತಮಿಳುನಾಡಿನಲ್ಲಿ ಹೆಣ್ಣುಮಕ್ಕಳ ಲಿಂಗಾನುಪಾತದಲ್ಲಿ ಏರಿಕೆ ಕಾಣಿಸಿಕೊಂಡಿತು.

ಕುಡಿಯುವ ನೀರಿನ ಯೋಜನೆ : 

ಚೆನ್ನೈನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದ್ದು 2004ರಲ್ಲಿ. ಈ ಯೋಜನೆಯನ್ನು ಮೊದಲಿಗೆ ಪರಿಚಯಿಸಿದವರು ಸಿ.ಎ ಎನ್ .ಅಣ್ಣಾದುರೈ, ಆ ನಂತರ ಕರುಣಾನಿಧಿ ಮುಂದುವರಿಸಿದರು. ಆ ನಂತರ ಈ ಯೋಜನೆಗೆ ಮರುಜೀವ ನೀಡಿದವರು ಜಯಲಲಿತಾ. 2001ರಲ್ಲಿ ಈ ಯೋಜನೆಗೆ ನ್ಯೂ ವೀರಣಂ ಎಂಬ ಹೆಸರು ಕೊಡಲಾಯಿತು.

ಮಳೆ ನೀರು ಸಂಗ್ರಹ : 

2001ರ ನಂತರ ತಮಿಳುನಾಡಿನಲ್ಲಿ ಮಳೆ ನೀರು ಸಂಗ್ರಹವನ್ನು ಎಲ್ಲ ಕಟ್ಟಡದಲ್ಲಿಯೂ ಕಡ್ಡಾಯ ಮಾಡಲಾಯಿತು. ಈ ಯೋಜನೆ ಜಾರಿಗೆ ತಂದ ನಂತರ ಚೆನ್ನೈನಲ್ಲಿ ಅಂತರ್ಜಲ ಮಟ್ಟದಲ್ಲಿ ಗುರುತಿಸುವಂಥ ಬದಲಾವಣೆ ಕಾಣಿಸಿಕೊಂಡಿತು.

ಪುಕ್ಕಟೆ ಲ್ಯಾಪ್ ಟಾಪ್ : 

2011ರಲ್ಲಿ ಈ ಯೋಜನೆಯನ್ನು ಸರಕಾರಿ ಹಾಗೂ ಸರಕಾರಿ ಅನುದಾನಿತ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗಾಗಿ ಪರಿಚಯಿಸಲಾಯಿತು. ಇದರಿಂದ 3.25 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

ಅಮ್ಮ ಕ್ಯಾಂಟೀನ್ : 

2013ರಲ್ಲಿ ಈ ಯೋಜನೆ ಪರಿಚಯಿಸಲಾಯಿತು. ಅಗ್ಗದ ದರಕ್ಕೆ ಆಹಾರ ಒದಗಿಸುವುದು ಈ ಯೋಜನೆ ಉದ್ದೇಶವಾಗಿತ್ತು. ಇಡ್ಲಿಗೆ 1, ಪೊಂಗಲ್ 5 ಹಾಗೂ ಮೊಸರನ್ನಕ್ಕೆ 3 ರುಪಾಯಿ ಇತ್ತು.

ಅಮ್ಮ ಬೇಬಿ ಕೇರ್ ಕಿಟ್ಸ್ : 

ಹೆರಿಗೆ ನಂತರ ತಾಯಂದಿರು ಹಾಗೂ ನವಜಾತ ಶಿಶುಗಳ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಈ ಯೋಜನೆ ಪರಿಚಯಿಸಲಾಯಿತು. ಈ ಯೋಜನೆ ಪ್ರಕಾರ ನೀಡುವ ಕಿಟ್ ನಲ್ಲಿ ಟವೆಲ್ , ಬಟ್ಟೆ, ಹಾಸಿಗೆ, ಸೊಳ್ಳೆ ಪರದೆ, ಎಣ್ಣೆ, ಮಕ್ಕಳ ಸೋಪು, ಶಾಂಪೂ, ಗೊಂಬೆ ಸೇರಿದಂತೆ ಹದಿನಾರು ವಸ್ತುಗಳು ಇರುತ್ತವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin