ಜಿಯೋಗೆ ಸೆಡ್ಡು ಹೊಡೆದ ಬಿಎಸ್‌ಎನ್‍ಎಲ್..!

ಈ ಸುದ್ದಿಯನ್ನು ಶೇರ್ ಮಾಡಿ

Jio-BSNL

ನವದೆಹಲಿ. ಡಿ.06 : ಕೇವಲ 3 ತಿಂಗಳಲ್ಲಿ 5 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿ ದೇಶದ ನಂ. 1 ಟೆಲಿಕಾಂ ಸಂಸ್ಥೆ ಎಂಬ ಪಟ್ಟಕ್ಕೇರಿದ ರಿಲಾಯನ್ಸ್ ಜಿಯೋ ಗೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‍ಎಲ್ ಸೆಡ್ಡು ಹೊಡೆದಿದ್ದು ಹೊಸ ಉಚಿತ ಆಫರ್ ನೊಂದಿಗೆ ಇರುವ ಗ್ರಾಹಕರನ್ನು ಉಳಿಸಿಕೊಳ್ಳುವುದರೊಂದಿಗೆ ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಯೋಗೆ ಸವಾಲೆಸೆದ ಭಾರತ್ ಸಂಚಾರ್ ನಿಮಗ್ ಲಿಮಿಟೆಡ್ (ಬಿಎಸ್‌ಎನ್‍ಎಲ್) ತಮ್ಮ ಚಂದಾದಾರರಿಗೆ ಉಚಿತ ವಾಯ್ಸ್ ಕಾಲ್ಸ್, ಇತರೆ ಫ್ರೀ ಆಫರ್ಗಳೊಂದಿಗೆ ಹೊಸ ಮಂತ್ಲಿ ಪ್ಲಾನ್ ಪರಿಚಯಿಸುತ್ತಿದೆ.

ಜನವರಿ 1ರಿಂದ ಈ ಬಂಪರ್ ಆಫರ್ ಚಂದಾದಾರರಿಗೆ ನೀಡಲಿದೆ. ತಿಂಗಳಿಗೆ ರೂ.149 ರೀಚಾರ್ಜ್’ನೊಂದಿಗೆ ದಿಗೆ ಯಾವ ನೆಟ್ವರ್ಕ್’ಗೆ ಬೇಕಾದರೂ ಅನ್ ಲಿಮಿಟೆಡ್ ಲೋಕಲ್ ಅಂಡ್ ನ್ಯಾಶನಲ್ ಕಾಲ್ ಜೊತೆಗೆ 300 ಎಂಬಿ 3ಜಿ/4ಜಿ ಡಾಟಾ ಉಚಿತವಾಗಿ ನೀಡುತ್ತಿದೆ. ತಿಂಗಳಿಗೆ ರೂ. 149ಕ್ಕೆ ಭಾರತದ ಯಾವ ನೆಟ್ವರ್ಕ್’ಗಾದರೂ ಅನಿಯಮಿತ ವಾಯ್ಸ್ ಕಾಲ್ ಮಾಡಬಹುದು. ಇದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದಿದ್ದಾರೆ ಬಿಎಸ್‍ಎನ್‍ಎಲ್ ಚೇರ್ಮನ್ ಅನುಪಮ್ ಶ್ರೀವಾತ್ಸವ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin