ಶಾಲೆ ಅಭಿವೃದ್ಧಿಗಾಗಿ ಮೈಸೂರಿನಲ್ಲಿ 10 ಸಾವಿರ ರೂಪಾಯಿಗೆ ನೃತ್ಯ ಮಾಡಿದ್ದ ಜಯಾ

ಈ ಸುದ್ದಿಯನ್ನು ಶೇರ್ ಮಾಡಿ

Jayalalitaa-01

ಬೆಂಗಳೂರು, ಡಿ.6- ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾಗೂ ಮಂಡ್ಯ ಜಿಲ್ಲೆಗೂ ಒಂದು ಸಂಬಂಧವಿದೆ. ಶಾಲೆಯೊಂದರ ಅಭಿವೃದ್ಧಿ ಕೆಲಸಕ್ಕಾಗಿ 10 ಸಾವಿರ ರೂಪಾಯಿ ಪಡೆದು ಮೈಸೂರಿನಲ್ಲಿ ನೃತ್ಯ ಮಾಡಿದ್ದರು.  ಶ್ರೀರಂಗಪಟ್ಟಣದ ನಗುವನಹಳ್ಳಿಯಲ್ಲಿ 1964ರಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗುತ್ತದೆ. ಆದರೆ ಮೂರು ವರ್ಷ ಕಳೆದರೂ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಶಾಲೆಗೆ ಸುಮಾರು ಆರು ಹೆಕ್ಟೇರ್ ಜಾಗವನ್ನ ದಾನಮಾಡಿದ್ದ ಎನ.ರಾಮಚಂದ್ರಯ್ಯ ಹೇಗಾದರೂ ಮಾಡಿ ಶಾಲೆಗೆ ಒಂದು ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಯೋಚಿಸಿ, ಡಾ.ರಾಜ್’ಕುಮಾರ್ ಅವರನ್ನು ಕರೆಸಿ ದೇಣಿಗೆ ಸಂಗ್ರಹಿಸಲು ಪ್ರಯತ್ನಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.

ದೇಣಿಗೆ ಸಂಗ್ರಹ ಕಷ್ಟ ಎನ್ನುವ ತೀರ್ಮಾನಕ್ಕೆ ಬಂದು ಕಲಾವಿದೆಯನ್ನು ಆಹ್ವಾನಿಸಿ ನೃತ್ಯ ಕಾರ್ಯಕ್ರಮ ಆಯೋಜಿಸಿ ಚಂದಾ ಎತ್ತಲು ಮುಂದಾಗುತ್ತಾರೆ. ಈ ಕಾಯಕ್ರಮಕ್ಕೆ ಯಾರನ್ನು ಆಹ್ವಾನಿಸುವುದು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದೇ ಜಯಲಲಿತಾ. ರಾಜ್ಯದ ನಂಟಿರುವ ಜಯಲಲಿತಾ ಈಗ ತಮಿಳು ಚಿತ್ರದಲ್ಲಿ ಜನಪ್ರಿಯ ಕಲಾವಿದೆ. ಈ ಕಾರಣಕ್ಕಾಗಿ ಜಯಾಲಲಿತಾರನ್ನು ಒಪ್ಪಿಸಲು ಮಾತುಕತೆ ನಡೆಯುತ್ತದೆ. ಆ ಕಾಲದ ಚಲನಚಿತ್ರ ನಟರಾದ ಬಾಲಕೃಷ್ಣ ಹಾಗೂ ಸಂಪತ್ ಅವರ ಸಹಾಯ ಪಡೆದು, ಮದ್ರಾಸïನಲ್ಲಿದ್ದ ಅಂದಿನ ನಟಿ ಜಯಲಲಿತಾರನ್ನ ಭೇಟಿ ಮಾಡಿ ಶಾಲಾ ಕಟ್ಟಡಕ್ಕೆ ದೇಣಿಗೆ ಸಂಗ್ರಹಿಸಲು ಸಹಾಯ ಮಾಡುವಂತೆ ಮನವಿ ಮಾಡಲಾಯಿತು.

ಇದಕ್ಕೆ ಒಪ್ಪಿದ ಜಯಲಲಿತಾ 1967ರ ಮಾರ್ಚ 19ರ ಭಾನುವಾರ ಮೈಸೂರಿಗೆ ಬಂದು ಕ್ರಾಫರ್ಡ ಹಾಲ್ ನಲ್ಲಿ ಸುಮಾರು ಒಂದುವರೆ ತಾಸು ನೃತ್ಯ ಮಾಡಿದ್ದರು. ಕಾರ್ಯಕ್ರಮಕ್ಕೆ ಭರ್ಜರಿ ಪ್ರಚಾರ ಮಾಡಿದ ಫಲ ಎಂಬಂತೆ ಜನ ಕಿಕ್ಕಿರಿದು ಈ ಕಾರ್ಯಕ್ರಮಕ್ಕೆ ಸೇರಿದ್ದರು. ಜಯಾ ನೃತ್ಯ ಕಾರ್ಯಕ್ರಮದಿಂದ 47 ಸಾವಿರ ರೂ. ದೇಣಿಗೆ ಸಂಗ್ರಹವಾಯ್ತು. ಆ ಹಣದಿಂದ ಶಾಲಾ ಕಟ್ಟಡವೂ ನಿರ್ಮಾಣವಾಯಿತು. ನೃತ್ಯ ಮಾಡಲು ಹತ್ತು ಸಾವಿರ ಸಂಭಾವನೆ ಪಡೆದಿದ್ದರೂ ಕೂಡ ಇಲ್ಲಿಯ ಜನ ಜಯಲಲಿತಾರ ಕಲಾ ಸೇವೆಯನ್ನು ಮಾತ್ರ ಮರೆತಿಲ್ಲ. ಅಂದು ಸಂಗ್ರಹವಾದ ದೇಣಿಗೆಯಿಂದ ಕಟ್ಟಿದ ಶಾಲೆಯಲ್ಲಿ ಇಂದಿನವರೆಗೂ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ಹುದ್ದೆಯನ್ನೂ ಅಲಂಕರಿಸಿದ್ದಾರೆ. ಇಂದು ಅದೇ ಜÁಗದಲ್ಲಿ ಪಿ.ಯು ಕಾಲೇಜ್ ಕೂಡ ಆರಂಭವಾಗಿದೆ. ಅಂದು ನೃತ್ಯಮಾಡಿ ಮಂಡ್ಯ ಜಿಲ್ಲೆಯ ಜನರ ಮನಸ್ಸು ಗೆದ್ದ ಜಯಲಲಿತಾ ಕಾವೇರಿ ವಿಚಾರಕ್ಕೆ ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಪದೇ ಪದೇ ತುತ್ತಾಗಿದ್ದು ಮಾತ್ರ ವಿಪರ್ಯಾಸ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin