ಅಮ್ಮನ ನಿಧನದಿಂದಾಗಿ ಕೆಎಸ್‍ಆರ್‍ಟಿಸಿಗೆ 2 ದಿನಕ್ಕೆ 1.50 ಕೋಟಿ ನಷ್ಟ : ಸಂಚಾರ ಪುನರಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

BUs-KSRTC

ಬೆಂಗಳೂರು, ಡಿ.7- ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕೆಎಸ್‍ಆರ್‍ಟಿಸಿ ಬಸ್ ಸ್ಥಗಿತಗೊಳಿಸಿದ್ದರಿಂದ ಸಂಸ್ಥೆಗೆ ಬರೋಬ್ಬರಿ 1.50 ಕೋಟಿ ರೂ. ನಷ್ಟವಾಗಿದೆ. ಸ್ಯಾಟ್‍ಲೈಟ್ ಹಾಗೂ ಶಾಂತಿನಗರದಿಂದ ಪ್ರತಿನಿತ್ಯ 400ಕ್ಕಿಂತ ಹೆಚ್ಚು ಬಸ್‍ಗಳು ತಮಿಳುನಾಡಿಗೆ ಸಂಚಾರ ಮಾಡುತ್ತಿದ್ದವು. ಜಯಲಲಿತಾ ಅವರ ನಿಧನದಿಂದಾಗಿ ಕಳೆದ ಎರಡು ದಿನಗಳಿಂದ ತಮಿಳುನಾಡಿಗೆ ಹೋಗುತ್ತಿದ್ದ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಕೆಎಸ್‍ಆರ್‍ಟಿಸಿಗೆ 1 ಕೋಟಿ 50 ಲಕ್ಷ ರೂ. ನಷ್ಟವಾಗಿದೆ ಎಂದು ಸಂಸ್ಥೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬಸ್ ಸಂಚಾರ ಆರಂಭ: ಕಳೆದೆರಡು ದಿನಗಳಿಂದ ತಮಿಳುನಾಡಿಗೆ ಸ್ಥಗಿತಗೊಂಡಿದ್ದ ಬಸ್ ಸಂಚಾರ ಇಂದಿನಿಂದ ಆರಂಭವಾಗಿದೆ.  ಚಾಮರಾಜನಗರ ವಿಭಾಗದಿಂದ ಹೋಗುತ್ತಿದ್ದ 75 ಬಸ್ ಸಂಚಾರ ಬೆಳಗ್ಗೆ 10 ಗಂಟೆ ನಂತರ ಆರಂಭವಾಗಿದೆ ಎಂದು ಕೆಎಸ್‍ಆರ್‍ಟಿಸಿ ಚಾಮರಾಜನಗರ ವಿಭಾಗದ ನಿಯಂತ್ರಣಾಧಿಕಾರಿ ಅಶೋಕ್‍ಕುಮಾರ್ ತಿಳಿಸಿದ್ದಾರೆ.  ಎಂದಿನಂತೆ ಗಡಿ ಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ, ಚಾಮರಾಜನಗರ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಏಳು ಚೆಕ್‍ಪೋಸ್ಟ್‍ಗಳಲ್ಲಿ ಬಂದೋಬಸ್ತ್ ಮಾಡಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin